alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈನಲ್ಲಿ ನಡೆದಿದೆ ನಂಬಲಸಾಧ್ಯ ಘಟನೆ

mumbai-woman-jumps-in-front-of-oncoming-train-disappears-and-then-this

ಮುಂಬೈನಲ್ಲೊಂದು ನಂಬಲಸಾಧ್ಯ ಘಟನೆ ನಡೆದಿದೆ. ಚಲಿಸುವ ರೈಲಿನ ಮುಂದೆ ಹಾರಿದ ಮಹಿಳೆಯೊಬ್ಬಳು ಅಚ್ಚರಿಯ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾಳೆ. ಇದರ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

ಸೆಂಟ್ರಲ್ ರೈಲ್ವೇಯ ಘಾಟ್ಕೋಪರ್ ಸ್ಟೇಷನ್ ನಲ್ಲಿ ಜೂನ್ 23 ರಂದು ಈ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ನಿಲ್ದಾಣದಲ್ಲಿದ್ದ ಪ್ರಯಾಣಿಕರು ನೋಡನೋಡುತ್ತಿದ್ದಂತೆಯೇ ವೇಗವಾಗಿ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿದ್ದಾಳೆ.

ರೈಲು ಮುಂದೆ ಹೋದ ಬಳಿಕ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಆತಂಕದಿಂದ ರೈಲು ಹಳಿಗಳ ಮೇಲೆ ನೋಡಿದರೆ ಅಲ್ಲಿ ಮಹಿಳೆಯ ಕುರುವೇ ಇರಲಿಲ್ಲ. ಅಲ್ಲಿದ್ದವರೆಲ್ಲ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದು, ಒಂದು ವೇಳೆ ಮಹಿಳೆ ದುರಂತದಲ್ಲಿ ಸಾವಿಗೀಡಾಗಿದ್ದರೆ ದೇಹವಾದರೂ ಇರಬೇಕಿತ್ತು ಎಂದು ತಲೆಕೆಡಿಸಿಕೊಂಡಿದ್ದಾರೆ.

ಕಡೆಗೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಗಮನಕ್ಕೆ ಈ ವಿಚಾರ ತಂದಿದ್ದು, ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆ ನಿಲ್ದಾಣದ ಮತ್ತೊಂದು ದ್ವಾರದ ಮೂಲಕ ಹೊರ ಹೋಗಿರುವುದು ಪತ್ತೆಯಾಗಿದೆ. ರೈಲಿನ ಮುಂದೆ ಮಹಿಳೆ ಹಾರಿದಾಗ ಆಕೆ ಹಳಿಗಳ ಮಧ್ಯ ಭಾಗಕ್ಕೆ ಬಿದ್ದಿದ್ದು, ಈ ಕಾರಣಕ್ಕೆ ಯಾವುದೇ ಅನಾಹುತ ಸಂಭವಿಸಿಲ್ಲವೆಂದು ಹೇಳಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೇ ಪೊಲೀಸರು ಮಹಿಳೆಯ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ರೈಲಿನ ಮುಂದೆ ಹಾರಿದ್ದಾಳೋ ಅಥವಾ ಆಕಸ್ಮಿಕವಾಗಿ ಕೆಳಗೆ ಬಿದ್ದಳೋ ಎಂಬುದರ ಪರಿಶೀಲನೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...