alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆಯಲ್ಲಿ ಫೇಲ್ ಆಗುವ ಭಯಕ್ಕೆ ಮಗನ ಜೊತೆ ಮಹಿಳೆ ಮಾಡಿದ್ಲು ಈ ಕೆಲಸ

ಮಹಾರಾಷ್ಟ್ರದ ಚಂದ್ರಾಪುರದಲ್ಲಿ 28 ವರ್ಷದ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಐದು ವರ್ಷದ ಮಗನ ಜೊತೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಮೃತ ಮಹಿಳೆ ಹೆಸರು ರೂಪಾಲಿ ಎನ್ನಲಾಗಿದ್ದು, ಆಕೆ ನವೆಂಬರ್ 19ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ಹೇಳಿದ್ದಾರೆ.

ಮಹಿಳೆ ಬಿ.ಕಾಂ. ಪರೀಕ್ಷೆ ಬರೆದಿದ್ದಳಂತೆ. ಆದ್ರೆ ಪರೀಕ್ಷೆಯಲ್ಲಿ ಪಾಸ್ ಆಗುವ ಭರವಸೆ ಮಹಿಳೆಗೆ ಇರಲಿಲ್ಲ ಎನ್ನಲಾಗಿದೆ. ಪರೀಕ್ಷೆಯಲ್ಲಿ ಫೇಲ್ ಆದ್ರೆ ಒಳ್ಳೆ ನೌಕರಿ ಸಿಗಲ್ಲ ಎನ್ನುವ ಕಾರಣಕ್ಕೆ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಹಿಳೆ ಹಾಗೂ ಮಗುವಿನ ಶವ ನದಿಯಲ್ಲಿ ತೇಲಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಿ.ಕಾಂ. ಮೂರನೇ ವರ್ಷದಲ್ಲಿ ಪಾಸ್ ಆಗಲು ರೂಪಾಲಿ ಕಷ್ಟಪಡುತ್ತಿದ್ದಳು ಎನ್ನಲಾಗಿದೆ. ಈಗಾಗಲೇ ಒಂದು ಬಾರಿ ಫೇಲ್ ಆಗಿದ್ದ ರೂಪಾಲಿ ಮತ್ತೆ ಪರೀಕ್ಷೆ ಬರೆದಿದ್ದಳು. ರೂಪಾಲಿ ಪತಿ ಸೇಲ್ಸ್ ಮೆನ್ ಕೆಲಸ ಮಾಡ್ತಾನೆ. ರೂಪಾಲಿ ಹಾಗೂ ಮಗ ಮನೆಯಲ್ಲಿಲ್ಲದ ಕಾರಣ ಪತಿ ಪೊಲೀಸರಿಗೆ ದೂರು ನೀಡಿದ್ದನಂತೆ. ತನಿಖೆ ವೇಳೆ ರೂಪಾಲಿ ಬ್ಯಾಗ್ ನಲ್ಲಿ ಸೂಸೈಡ್ ನೋಟ್ ಸಿಕ್ಕಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...