alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಕಮಾಲ್: ಕಾಣೆಯಾದ 2 ಗಂಟೆಯಲ್ಲೇ ಪತ್ತೆಯಾದ ಪುಟ್ಟ ಬಾಲಕಿ

whatsapp

ಸಾಮಾಜಿಕ ಜಾಲ ತಾಣಗಳು ದುರ್ಬಳಕೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಾಟ್ಸಾಪ್ ಬಳಕೆಯಿಂದ ನಾಪತ್ತೆಯಾಗಿದ್ದ ಪುಟ್ಟ ಬಾಲಕಿಯೊಬ್ಬಳನ್ನು ಕೇವಲ 2 ಗಂಟೆಯೊಳಗೆ ಪತ್ತೆ ಹಚ್ಚಿದ ಘಟನೆ ಮುಂಬೈನಲ್ಲಿ ನಡೆದಿದೆ.

ಮನೆ ಮುಂದೆ ಆಟವಾಡುತ್ತಿದ್ದ ರೋಷನಿ ಎಂಬ 2 ವರ್ಷದ ಬಾಲಕಿ ಕಾಣೆಯಾಗಿದ್ದಳು. ಆಕೆಗಾಗಿ ಸುತ್ತಮುತ್ತ ಹುಡುಕಾಡಿದ ಪೋಷಕರು ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಬಾಲಕಿಯ ಫೋಟೋವನ್ನು ಪೊಲೀಸರು ಸಾಮಾಜಿಕ ಜಾಲ ತಾಣ ವಾಟ್ಸಾಪ್ ನಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಿದ್ದರು.

ಬೆಳಿಗ್ಗೆ 10-30 ಕ್ಕೆ ಬಂದರ್ ಸ್ಟೇಷನ್ ಬಳಿಯಿಂದ ಕಾಣೆಯಾಗಿದ್ದ ಬಾಲಕಿಯ ಫೋಟೋವನ್ನು ವಾಟ್ಸಾಪ್ ನಲ್ಲಿ ಗಮನಿಸಿದವರೊಬ್ಬರು ಗ್ರಾಂಟ್ ರೋಡ್ ಸ್ಟೇಷನ್ ನಲ್ಲಿ ಆಕೆ ಇದ್ದುದ್ದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ರೈಲ್ವೇ ಸ್ಟೇಷನ್ ಪ್ರವೇಶಿಸಿದ್ದು, ಅಲ್ಲಿದ್ದ ಲೋಕಲ್ ಟ್ರೈನ್ ಏರಿ ಗ್ರಾಂಟ್ ರೋಡ್ ಸ್ಟೇಷನ್ ವರೆಗೆ ಹೋಗಿದ್ದಳೆನ್ನಲಾಗಿದೆ. ಆದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಬಾಲಕಿಯನ್ನು ಯಾರಾದರೂ ಅಪಹರಿಸಲು ಯತ್ನಿಸಿರಬಹುದೆಂಬುದರ ಕುರಿತು ಪರಿಶೀಲಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...