alex Certify
ಕನ್ನಡ ದುನಿಯಾ       Mobile App
       

Kannada Duniya

ಭವಿಷ್ಯದ ಕನಸು ಕಂಡಿದ್ದ ವಿದ್ಯಾರ್ಥಿ ವಿಧಿಯಾಟಕ್ಕೆ ಬಲಿ

ಮುಂಬೈನಲ್ಲಿ 10ನೇ ತರಗತಿ ವಿದ್ಯಾರ್ಥಿ ಪರೀಕ್ಷೆಗೂ ಮುನ್ನಾದಿನ ಎದೆನೋವಿನಿಂದ ಮೃತಪಟ್ಟಿದ್ದಾನೆ. ವಿದ್ಯಾರ್ಥಿಗೆ ಹೃದಯಾಘಾತವಾಗಿರಬಹುದು ಅಂತಾ ವೈದ್ಯರು ಅನುಮಾನಿಸಿದ್ದಾರೆ. ಮರಣೋತ್ತರ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ.

ದಾದರ್ ನ ಶಿಶು ವಿಹಾರ್ ಸ್ಕೂಲ್ ನಲ್ಲಿ ಓದ್ತಾ ಇದ್ದ ಋತ್ವಿಕ್ ಮಂಗಳವಾರ ರಾತ್ರಿ ಮಲಗಲು ತೆರಳುವಾಗ ತನ್ನನ್ನು ಬೆಳಗ್ಗೆ 5.30ಕ್ಕೆ ಎಬ್ಬಿಸುವಂತೆ ತಾಯಿಗೆ ಹೇಳಿದ್ದ. ಪರೀಕ್ಷೆಗೆ ಓದಿಕೊಳ್ಳಬೇಕು, ಜೊತೆಗೆ ಹೋಳಿ ಆಚರಣೆಯೂ ಇರುವುದರಿಂದ ಬೇಗನೇ ಏಳುತ್ತೇನೆ ಎಂದಿದ್ದ.

ತಡರಾತ್ರಿ ತೀವ್ರ ಎದೆನೋವೆಂದು ತಾಯಿಯನ್ನು ಕರೆದಿದ್ದಾನೆ. ಕೂಡಲೇ ಋತ್ವಿಕ್ ನನ್ನು ಕೆಇಎಂ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದ್ರೆ ಮಾರ್ಗಮಧ್ಯೆಯೇ ಋತ್ವಿಕ್ ಮೃತಪಟ್ಟಿದ್ದಾನೆ. ಸಾವಿಗೆ ಹೃದಯಾಘಾತವೇ ಕಾರಣವಿರಬಹುದು ಅಂತಾ ಹೇಳಲಾಗ್ತಿದೆ. ಋತ್ವಿಕ್ ಗೆ ಇಬ್ಬರು ಸಹೋದರಿಯರಿದ್ದಾರೆ. ಪರೀಕ್ಷೆ ಬರೆದು ಉತ್ತಮ ಅಂಕ ಪಡೆಯಬೇಕು ಎಂದುಕೊಂಡಿದ್ದವ, ವಿಧಿಯಾಟಕ್ಕೆ ಬಲಿಯಾಗಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...