alex Certify
ಕನ್ನಡ ದುನಿಯಾ       Mobile App
       

Kannada Duniya

ಕಳೆದುಹೋಗಿದ್ದ ಮೊಬೈಲನ್ನು ಈಕೆ ಹುಡುಕಿದ್ದೇಗೆ ಗೊತ್ತಾ?

ತನ್ನ ಮೊಬೈಲ್‌ ಕದ್ದವನನ್ನು 19 ವರ್ಷದ ಯುವತಿ ಹುಡುಕಿ ಪೊಲೀಸರಿಗೆ ಒಪ್ಪಿಸಿದ್ದಾಳೆ. ಮುಂಬೈನ ಮರೋಲ್‌ನಲ್ಲಿ ವಾಸಿಸುವ ಜೀನತ್‌ ಬಾನು ಹಕ್‌, ಶಾಲಾ ಪ್ರವಾಸದಲ್ಲಿ ತನ್ನ ಫೋನ್‌ ಕಳೆದುಕೊಂಡಿದ್ದಾಳೆ.

ತಕ್ಷಣ ಕಂಪ್ಯೂಟರ್‌ನಿಂದ ತನ್ನ ಗೂಗಲ್‌ ಅಕೌಂಟ್‌ಗೆ ಲಾಗ್‌ ಇನ್‌ ಆದ ಆಕೆ, ಕಳ್ಳ ಸರ್ಚ್‌ ಮಾಡಿರುವ ವಿವರಗಳನ್ನು ಸಂಪಾದಿಸಿದ್ದಾಳೆ. ಇದೇ ಮೊಬೈಲ್‌ ಬಳಸಿ ಆತ ರೈಲ್ವೆ ಟಿಕೆಟ್‌ ಬುಕ್‌ ಮಾಡಿದ್ದು, ಜೀನತ್‌ಗೆ ಆತನ ಪಿಎನ್‌ಆರ್‌ ನಂಬರ್‌ ಸಿಕ್ಕಿದೆ. ಗೂಗಲ್‌ ಫೋಟೋಸ್‌ಗೆ ತೆರಳಿ, ಫೋನ್‌ನಲ್ಲಿದ್ದ ಟಿಕೆಟನ್ನೂ ಅವಳು ಕಂಡು ಹಿಡಿದಿದ್ದಾಳೆ.

ಮೊಬೈಲ್‌ ಕದ್ದವನು ಸೆಲ್ವರಾಜ್‌ ಶೆಟ್ಟಿ(32) ಎಂಬುದು ಇದರಿಂದ ಗೊತ್ತಾಗಿದೆ. ಈ ಎಲ್ಲ ಮಾಹಿತಿಯನ್ನು ರೈಲ್ವೆ ಭದ್ರತಾ ಪಡೆ ಜತೆ ಹಂಚಿಕೊಂಡಿದ್ದು, ಪೊಲೀಸರು ಕಳ್ಳ ತನ್ನ ಸೀಟಿನಲ್ಲಿ ಕೂರುವುದನ್ನೇ ಕಾದು ಕುಳಿತಿದ್ದರು. ಪುದುಚೇರಿ ಎಕ್ಸ್‌ಪ್ರೆಸ್‌ನಲ್ಲಿದ್ದ ಮೊಬೈಲ್‌ ಕಳ್ಳ ಸೀಟ್‌ನಲ್ಲಿ ಕುಳಿತ ಕೂಡಲೇ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಈ ಫೋನ್ ತನ್ನದೇ ಎಂದು ವಾದಿಸಿದ ಆತ, ತನ್ನ ಜತೆಗೆ ಮಹಿಳೆ ಇದ್ದು, ಫೋನ್‌ ಆಕೆಗೆ ಸೇರಿದ್ದು ಎಂದು ಮೊದಲಿಗೆ ಪೊಲೀಸರೊಂದಿಗೆ ಜಗಳವಾಡಿ ಬಳಿಕ ತಪ್ಪೊಪ್ಪಿಕೊಂಡಿದ್ದಾನೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...