alex Certify
ಕನ್ನಡ ದುನಿಯಾ       Mobile App
       

Kannada Duniya

ಲವ್ ಲೆಟರ್ ನೀಡುವಾಗ ಮೋಸ ಮಾಡಿದ ಸ್ನೇಹಿತನಿಗೆ ಇಂಥ ಶಿಕ್ಷೆ

ಮುಂಬೈನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 16 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಆಪ್ತ ಸ್ನೇಹಿತನಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಕೊಲೆಗೆ ಕಾರಣ ಕೇಳಿದ ಪೊಲೀಸರೂ ದಂಗಾಗಿದ್ದಾರೆ.

10ನೇ ತರಗತಿಯಲ್ಲಿ ಓದುತ್ತಿರುವ ರಾಕೇಶ್ 21 ವರ್ಷದ ಸ್ನೇಹಿತನೊಬ್ಬನ ಜೊತೆ ಸೇರಿ ತನ್ನ ಆಪ್ತ ಸ್ನೇಹಿತ ರಾಜೇಶ್ ನನ್ನು ಕೊಲೆ ಮಾಡಿದ್ದಾನೆ. ಹುಡುಗಿ ವಿಚಾರದಲ್ಲಿ ರಾಜೇಶ್ ಮೋಸ ಮಾಡಿದ್ದ ಎನ್ನುವ ಕಾರಣಕ್ಕೆ ರಾಕೇಶ್ ಈ ಕೆಲಸಕ್ಕೆ ಕೈ ಹಾಕಿದ್ದಾನೆ.

ಬುಧವಾರ ಘಟನೆ ನಡೆದಿದೆ. ಕ್ಲಾಸ್ ನಲ್ಲಿ ಪರೀಕ್ಷೆಯಿತ್ತು ಎನ್ನಲಾಗಿದೆ. ಈ ವೇಳೆ ಚಾಕು ಹಿಡಿದು ಕ್ಲಾಸ್ ರೂಮಿಗೆ ಬಂದ ರಾಕೇಶ್, ರಾಜೇಶ್ ಕತ್ತು ಹಾಗೂ ತಲೆ ಮೇಲೆ ದಾಳಿ ನಡೆಸಿದ್ದಾನೆ. ಹತ್ಯೆಯನ್ನು ಮೂಕ ಪ್ರೇಕ್ಷಕರಂತೆ ನೋಡ್ತಿದ್ದ ವಿದ್ಯಾರ್ಥಿಗಳಿಗೆ ಕೊಲೆ ಬೆದರಿಕೆ ಹಾಕಿದ್ದಾನೆ ರಾಕೇಶ್.

ಘಟನೆ ನಡೆದ ನಂತ್ರ ತಪ್ಪಿಸಿಕೊಳ್ಳಲು ಸಾರ್ವಜನಿಕ ಸಾರಿಗೆ ಬಳಸಿದ್ದ ಆರೋಪಿಗಳು ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ. ರಾಕೇಶ್ ಹುಡುಗಿಯೊಬ್ಬಳನ್ನು ಪ್ರೀತಿ ಮಾಡ್ತಿದ್ದ ಎನ್ನಲಾಗಿದೆ. ರಾಜೇಶ್ ಕೈನಲ್ಲಿ ಪ್ರೇಮ ಪತ್ರವನ್ನು ಹುಡುಗಿಗೆ ಕಳುಹಿಸುತ್ತಿದ್ದನಂತೆ. ರಾಜೇಶ್ ಮಧ್ಯದಲ್ಲಿಯೇ ರಾಕೇಶ್ ಬದಲು ರಾಜೇಶ್ ಎಂದು ಹೆಸರು ಬದಲಿಸಿ ಹುಡುಗಿಗೆ ಲೆಟರ್ ಕೊಡ್ತಿದ್ದ ಎನ್ನಲಾಗಿದೆ. ಇದಕ್ಕೆ ಕೋಪಗೊಂಡ ರಾಕೇಶ್ ಆಪ್ತ ಸ್ನೇಹಿತನನ್ನು ಕೊಲೆ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...