alex Certify
ಕನ್ನಡ ದುನಿಯಾ       Mobile App
       

Kannada Duniya

ಓವರ್ ಟೇಕ್ ಜಗಳಕ್ಕೆ ಬಲಿಯಾದ ಓಲಾ ಕ್ಯಾಬ್ ಚಾಲಕ

ಓವರ್ ಟೇಕ್ ವಿಚಾರಕ್ಕೆ ನಡೆದ ಜಗಳದಲ್ಲಿ ಮೂವರು ಸ್ಕೂಟರ್ ಸವಾರರು ಓಲಾ ಕ್ಯಾಬ್ ಚಾಲಕನನ್ನು ಹತ್ಯೆ ಮಾಡಿದ್ದಾರೆ. ಮುಂಬೈನ ಶಿವಾಜಿ ನಗರದಲ್ಲಿ ಈ ಘಟನೆ ನಡೆದಿದೆ. 38 ವರ್ಷದ ಸಲೀಂ ಗುಲಾಮ್ ಶೇಖ್ ಹತ್ಯೆಯಾದ ಚಾಲಕ.

ಸಲೀಂಗೆ ಒಬ್ಬ ವಿಕಲಚೇತನ ಮಗ ಹಾಗೂ ಕೇವಲ 8 ತಿಂಗಳ ಪುಟ್ಟ ಮಗು ಕೂಡ ಇತ್ತು. ಸಲೀಂ ಸೋಮವಾರ ರಾತ್ರಿ 11 ಗಂಟೆ ವೇಳೆಗೆ ಡ್ಯೂಟಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ. ಮೂವರು ಯುವಕರು ಸ್ಕೂಟರ್ ನಲ್ಲಿ ಪದೇ ಪದೇ ಅವನನ್ನು ಓವರ್ ಟೇಕ್ ಮಾಡುತ್ತಿದ್ರು.

ಕಾರಿಗೆ ಅಡ್ಡ ಬರುತ್ತಿದ್ರು.  ಕಿಟಿಕಿ ಬಳಿ ಬಂದು ಚಾಲಕನನ್ನು ಮನಬಂದಂತೆ ನಿಂದಿಸುತ್ತಿದ್ರು, ಕಿಚಾಯಿಸುತ್ತಿದ್ರು. ಇದರಿಂದ ಕಿರಿಕಿರಿ ಅನುಭವಿಸಿದ ಸಲೀಂ ಸ್ಕೂಟರ್ ಅನ್ನು ಉಜ್ಜಿಕೊಂಡೇ ಮುಂದಕ್ಕೆ ಚಲಿಸಿದ್ದಾನೆ. ಇದು ಜಗಳಕ್ಕೆ ಕಾರಣವಾಗಿದೆ.

ಕೊನೆಗೆ ಮೂವರೂ ಸೇರಿ ಸಲೀಂ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಅಲ್ಲಿಂದ ಓಡಿ ಹೋಗಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲೂ ಸೆರೆಯಾಗಿದೆ. ಸಲೀಂನನ್ನು ಸಾರ್ವಜನಿಕರು ಆಸ್ಪತ್ರೆಗೆ ಕರೆದೊಯ್ದರು. ಆದ್ರೆ ತಲೆಗೆ ಪೆಟ್ಟು ಬಿದ್ದಿದ್ರಿಂದ ಆತ ಬದುಕಲಿಲ್ಲ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...