alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹ ಸಂತ್ರಸ್ಥರಿಗೆ ಟ್ವಿಟ್ಟರ್ ಮೂಲಕ ಹರಿದು ಬರ್ತಿದೆ ನೆರವು

ಭಾರೀ ಮಳೆ ಹಾಗೂ ಪ್ರವಾಹದ ಅಬ್ಬರಕ್ಕೆ ವಾಣಿಜ್ಯ ನಗರಿ ಮುಂಬೈ ಅಕ್ಷರಶಃ ಮುಳುಗಡೆಯಾಗಿದೆ. 2005ರ ನಂತರ ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಭಾರೀ ವರ್ಷಧಾರೆಯಾಗಿದೆ. ಮನೆ, ಕಚೇರಿ ಹೀಗೆ ಎಲ್ಲಾ ಕಡೆಯೂ ನೀರೋ ನೀರು. ಸಾವಿರಾರು ಮಂದಿ ಸಂತ್ರಸ್ಥರಾಗಿದ್ದಾರೆ.

ಸಂಕಷ್ಟದಲ್ಲಿರೋ ಮುಂಬೈಕರ್ ಗಳಿಗೆ ಟ್ವಿಟ್ಟರ್ ಮೂಲಕ ನೆರವಿನ ಮಹಾಪೂರವೇ ಹರಿದು ಬರ್ತಿದೆ. ತೊಂದರೆಗೀಡಾಗಿರೋ ನೆರೆಹೊರೆಯವರಿಗೆ ಆಹಾರ, ಕುಡಿಯೋ ನೀರು, ವಸತಿ ನೀಡೋದಾಗಿ ಹಲವರು ಟ್ವಿಟ್ಟರ್ ಮೂಲಕ ಆಫರ್ ಕೊಟ್ಟಿದ್ದಾರೆ.

ತಮ್ಮ ಮನೆ ಹಾಗೂ ಕಚೇರಿಯಲ್ಲಿ ಸಂತ್ರಸ್ಥರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡ್ತಿದ್ದಾರೆ. ಮೊದಲು ಓರ್ವ ಹೀಗೆ ಸಹಾಯ ನೀಡೋದಾಗಿ ಟ್ವೀಟ್ ಮಾಡಿದ್ದ. ನಂತರ ಹತ್ತಾರು ಜನರು ಇದೇ ರೀತಿ ಸಹಾಯ ಹಸ್ತ ನೀಡಿದ್ದಾರೆ. ಜನರ ಪರೋಪಕಾರವನ್ನು ಪೊಲೀಸರು ಕೂಡ ಶ್ಲಾಘಿಸಿದ್ದಾರೆ.

ಇನ್ನು 48 ಗಂಟೆಗಳ ಕಾಲ ಮುಂಬೈಗೆ ವರುಣನ ಕಾಟ ತಪ್ಪಿದ್ದಲ್ಲ. ಭಾರೀ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಎನ್ ಡಿ ಆರ್ ಎಫ್ ತಂಡ ಸಿದ್ಧವಾಗಿದೆ. ಜನರಿಗೆ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...