alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಸಿಲಿಗೆ ಬೆಂಡಾದ ರೈಲ್ವೆ ಹಳಿಗಳನ್ನು ತಂಪಾಗಿಸಲು ಹೊಸ ಪ್ಲಾನ್

ಮುಂಬೈನಲ್ಲಿ ಬಿಸಿಲ ಅಬ್ಬರ ಹೆಚ್ಚಾಗಿದೆ. ಬದ್ಲಾಪುರ್ ಹಾಗೂ ಅಂಬರ್ ನಾಥ್ ನಿಲ್ದಾಣಗಳ ಮಧ್ಯೆ ರೈಲು ಹಳಿಗಳೇ ಬಿಸಿಲ ಝಳಕ್ಕೆ ಬೆಂಡಾಗುತ್ತಿವೆ. ಉಷ್ಣಾಂಶದಲ್ಲಿ ವಿಪರೀತ ಏರಿಕೆಯಿಂದಾಗಿ ಹಳಿಗಳು ಬಾಗಿಕೊಂಡಿವೆ.

ಇದರಿಂದ ರೈಲುಗಳ ಸಂಚಾರಕ್ಕೂ ಅಡ್ಡಿಯಾಗಿತ್ತು. ರೈಲ್ವೆ ಹಳಿಗಳು ಬಿಸಿಲಿಗೆ ಕಾಯದಂತೆ ತಡೆಯಲು ಎಲೆಗಳನ್ನು ಬಳಸಲಾಗುತ್ತಿದೆ. ಹಳಿಗಳ ಮೇಲೆ ಎಲೆಗಳಿಂದ ಮುಚ್ಚಲಾಗಿದೆ. ಸದ್ಯ ಮುಂಬೈನಲ್ಲಿ ಉಷ್ಣಾಂಶ 36.5 ಡಿಗ್ರಿ ಸೆಲ್ಸಿಯಸ್ ಇದೆ.

ಹಳಿಗಳು ಬಿಸಿಲಿಗೆ ಕಾದು ಕಾದು ಉಷ್ಣಾಂಶ 40 ಡಿಗ್ರಿಗೂ ಅಧಿಕವಾಗಿರುತ್ತದೆ ಅಂತಾ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಾಹ್ನ 3 ಗಂಟೆ ಸಮಯದಲ್ಲಂತೂ ಬಿಸಿಲು ಝಳ ಹೆಚ್ಚಾಗಿರುವುದರಿಂದ ಹಳಿಗಳು ಬಾಗಿ ಹೋಗುತ್ತಿವೆ.

ಎಲ್ಲೆಲ್ಲಿ ಈ ರೀತಿ ಆಗಿದೆ ಎಂಬುದನ್ನು ಪರಿಶೀಲಿಸಿ, ರೈಲ್ವೆ ಇಲಾಖೆಯ ಸಿಬ್ಬಂದಿ ಅದನ್ನು ಸರಿಪಡಿಸುತ್ತಿದ್ದಾರೆ. ಹಳಿಗಳು ಜಾಸ್ತಿ ಕಾಯದಂತೆ ತಂಪಾಗಿಡಲು ಮರದ ಎಲೆಗಳಿಂದ ಮುಚ್ಚಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...