alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಂದಿ ಆಯೋ ಯುವಕನ ಪ್ರಾಮಾಣಿಕತೆ ದೇಶಕ್ಕೇ ಮಾದರಿ

ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಅನ್ನೋದಕ್ಕೆ ಮುಂಬೈನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. 30 ವರ್ಷದ ದೀಪ್ ಚಂದ್ ಗುಪ್ತಾ ರೈಲ್ವೆ ಸ್ಟೇಶನ್ ಬಳಿ ಚಿಂದಿ ಆಯೋ ಕೆಲಸ ಮಾಡ್ತಾನೆ. ಜೊತೆಗೆ ಪ್ರಯಾಣಿಕರ ಲಗೇಜ್ ಹೊತ್ತು ಬಿಡಿಗಾಸು ಸಂಪಾದಿಸಿ ಬದುಕು ಸಾಗಿಸ್ತಾನೆ.

ಥಾಣೆಯ ರೈಲ್ವೆ ನಿಲ್ದಾಣದಲ್ಲಿ ದೀಪ್ ಚಂದ್ ಗೆ ಪರ್ಸ್ ಒಂದು ಸಿಕ್ಕಿತ್ತು. ಅದರಲ್ಲಿ 33,000 ರೂಪಾಯಿ ಹಣ ಜೊತೆಗೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳಿದ್ವು. ಅದನ್ನು ಇಟ್ಟುಕೊಂಡಿದ್ರೆ ದೀಪ್ ಚಂದ್ ಜೀವನವೂ ಹಸನಾಗುತ್ತಿತ್ತು.

ಆದ್ರೆ ಆತ ಹಾಗೆ ಮಾಡಲಿಲ್ಲ. ಕೂಡಲೇ ಪರ್ಸ್ ತೆಗೆದುಕೊಂಡು ಹೋಗಿ ಸ್ಟೇಶನ್ ಮಾಸ್ಟರ್ ಗೆ ಒಪ್ಪಿಸಿದ ದೀಪ್ ಚಂದ್, ಅದನ್ನು ಮಾಲೀಕರಿಗೆ ತಲುಪಿಸುವಂತೆ ಮನವಿ ಮಾಡಿದ್ದಾನೆ. ಥಾಣೆಯ ಅಕ್ಷರಾ ಮೊಕಾಶಿ ಎಂಬಾಕೆಗೆ ಸೇರಿದ ಪರ್ಸ್ ಅದಾಗಿತ್ತು.

ಕಳೆದು ಹೋದ ಹಣ ಮತ್ತು ಪರ್ಸ್ ವಾಪಸ್ ಸಿಗುತ್ತಿದ್ದಂತೆ ಅಕ್ಷರಾ ಆನಂದಭಾಷ್ಪ ಸುರಿಸಿದ್ದಾಳೆ. ಸಿಕ್ಕ ಪರ್ಸ್ ವಾಪಸ್ ಕೊಟ್ಟು ಪ್ರಾಮಾಣಿಕತೆ ಮೆರೆದ ದೀಪ್ ಚಂದ್ ಗೆ ಅಕ್ಷರಾ 2500 ರೂಪಾಯಿಯನ್ನು ಗಿಫ್ಟ್ ಆಗಿ ಕೊಟ್ಟಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...