alex Certify
ಕನ್ನಡ ದುನಿಯಾ       Mobile App
       

Kannada Duniya

ಬರೋಬ್ಬರಿ 10 ಗಂಟೆ ಟ್ರಾಫಿಕ್ ನಲ್ಲೇ ಹೈರಾಣಾದ ಜನ

traffic jam

ಮುಂಬೈ: ರಸ್ತೆಯಲ್ಲಿ ಸಂಚರಿಸುವಾಗ ಆಕಸ್ಮಿಕವಾಗಿ ಸ್ವಲ್ಪ ಸಮಯ ಟ್ರಾಫಿಕ್ ಜಾಮ್ ಆದರೆ ಗೊಣಗುತ್ತೇವೆ. ಅಂತಹುದರಲ್ಲಿ ಬರೋಬ್ಬರಿ 10 ಗಂಟೆ ಕಾಲ ವಾಹನ ಸಂಚಾರ ದಟ್ಟಣೆಯಿಂದ ಜನ ತೊಂದರೆ ಅನುಭವಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.

ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬರೋಬ್ಬರಿ 10 ಗಂಟೆ ಕಾಲ ಜನ ರಸ್ತೆಯಲ್ಲೇ ವಾಹನದಲ್ಲಿ ಕಾಲಕಳೆಯುವ ಅನಿವಾರ್ಯತೆ ಎದುರಾಗಿತ್ತು. ಮುಂಬೈ- ಪುಣೆ ನಡುವಿನ ಎಕ್ಸ್ ಪ್ರೆಸ್ ವೇನಲ್ಲಿ ಲೊನಾವಾಲಾ-ಖಂಡಾಲ ಘಾಟ್ ನಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ತೈಲ ಹೊರ ಚೆಲ್ಲಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ವಾಹನವೊಂದು ಓವರ್ ಟೇಕ್ ಮಾಡಿದ ಸಂದರ್ಭದಲ್ಲಿ ಟ್ಯಾಂಕರ್ ಚಾಲಕ ಸಡನ್ ಬ್ರೇಕ್ ಹಾಕಿದ್ದರಿಂದ ಟ್ಯಾಂಕರ್ ಪಲ್ಟಿಯಾಗಿತ್ತೆನ್ನಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಹೆದ್ದಾರಿ ನಿರ್ವಹಣೆ ಸಿಬ್ಬಂದಿ, ಚೆಲ್ಲಿದ್ದ ತೈಲದ ಮೇಲೆ ಮರಳು, ಮಣ್ಣು ಹಾಕಿದ್ದಾರೆ. ಇದಕ್ಕೆ ಬಹಳ ಸಮಯ ಹಿಡಿದಿದ್ದರಿಂದ ಬದಲಿ ಸಂಪರ್ಕ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಯಿತಾದರೂ, ಅಲ್ಲಿಯೂ ಏಕಾಏಕಿ ವಾಹನಗಳು ನುಗ್ಗಿದ್ದರಿಂದ ಜನ ಸುಮಾರು 10 ಗಂಟೆ ಕಾಲ ರಸ್ತೆಯಲ್ಲೇ ಕಾದು ಕಾದು ಹೈರಾಣಾಗಿದ್ದಾರೆ. ವಾರಾಂತ್ಯವಾಗಿದ್ದರಿಂದ ಜನ, ವಾಹನ ದಟ್ಟಣೆ ಜಾಸ್ತಿಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...