alex Certify
ಕನ್ನಡ ದುನಿಯಾ       Mobile App
       

Kannada Duniya

8 ವರ್ಷದ ಹಿಂದಿನ ರೇಪ್-ಮರ್ಡರ್ ಕೇಸ್‌ ಪತ್ತೆಗೆ ನೆರವಾಯ್ತು ಡಿಎನ್ಎ ಬ್ಯಾಂಕ್

ಪ್ರತಿ ತಿಂಗಳು ಅಪ್ರಾಪ್ತೆಯರು ಹಾಗೂ ಮಹಿಳೆಯರ ಮೇಲೆ ಅನೇಕ ಅತ್ಯಾಚಾರ ಪ್ರಕರಣಗಳು ನಡೆಯುತ್ತವೆ. ಬಹುತೇಕ ಪ್ರಕರಣಗಳು ಆರಂಭದಲ್ಲಿ ಭಾರೀ ಸದ್ದು, ಸುದ್ದಿ ಮಾಡುತ್ತವೆ, ಕೊನೆಗೆ ಜನರು ಮರೆತೇ ಬಿಡುತ್ತಾರೆ. 8 ವರ್ಷಗಳ ಹಿಂದೆ ಮಹಾರಾಷ್ಟ್ರದ ರಾಜಧಾನಿ ಮುಂಬೈನ ನೆಹರೂ ನಗರದಲ್ಲಿ ನಡೆದಿದ್ದ ಪ್ರಕರಣವೂ ಅಂಥದರಲ್ಲೇ ಒಂದಾಗಿತ್ತು.

2010ನೇ ಇಸವಿಯ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಕ್ರಮವಾಗಿ 6 ವರ್ಷ ಹಾಗೂ 9 ವರ್ಷದ ಬಾಲಕಿಯರನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. ಈ 2 ಪ್ರಕರಣಗಳು ಕುರ್ಲಾದ ಜನರನ್ನು ಬೆಚ್ಚಿ ಬೀಳಿಸಿತ್ತು. ಆದರೆ ವರ್ಷ 8 ಕಳೆದರೂ ಆರೋಪಿಗಳ ಸುಳಿವೇ ಸಿಕ್ಕಿರಲಿಲ್ಲ.
ಆದರೆ ತಡವಾಗಿಯಾದರೂ ಇದೀಗ ಪೊಲೀಸರು ಆ ಕಾಮುಕನನ್ನು ಹಿಡಿದಿದ್ದಾರೆ. ಇದಕ್ಕಾಗಿ ದೇಶದ ಮೊದಲ ಡಿಎನ್ಎ ಡಾಟಾ ಬ್ಯಾಂಕ್‌ಗೆ ಧನ್ಯವಾದ ಹೇಳಬೇಕಿದೆ.

20ಕ್ಕೂ ಹೆಚ್ಚು ಮಕ್ಕಳನ್ನು ನವ ಮುಂಬೈನಾದ್ಯಂತ ಚುಡಾಯಿಸಿದ ಆರೋಪದಲ್ಲಿ ಕಳೆದ ತಿಂಗಳು ರೆಹಾನ್ ಖುರೇಷಿಯನ್ನು ಬಂಧಿಸಿದರು. ಡಿಎನ್ಎ ಡಾಟಾ ಬ್ಯಾಂಕ್ ಸಹಾಯದಿಂದ ಪೊಲೀಸರು 8 ವರ್ಷದ ಹಿಂದಿನ ಅತ್ಯಾಚಾರ- ಕೊಲೆ ಕೃತ್ಯ ಎಸಗಿದ ಪಾಪಿ ಇವನೇ ಎಂಬುದನ್ನು ಪತ್ತೆ ಮಾಡಿದರು.

ಬಂಧಿತ ಖುರೇಷಿಯನ್ನು ಪೂರ್ವಾಪರವನ್ನೆಲ್ಲಾ ವಿಚಾರಿಸುವಾಗ ತಾನು 2010 ರಲ್ಲಿ ಚುನಾಭಟ್ಟಿ ಪ್ರದೇಶದಲ್ಲಿ ವಾಸವಿದ್ದೆ, ನೆಹರೂ ನಗರಕ್ಕೆ ಆಗಾಗ ಹೋಗುತ್ತಿದ್ದೆ ಎಂದು ಬಾಯಿಬಿಟ್ಟ. ತಕ್ಷಣ ಜಾಗೃತರಾದ ಪೊಲೀಸರು ಆತನ ಡಿಎನ್ಎ ಮಾದರಿಯನ್ನು ಕಲಿನಾದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದರು. ಅದಕ್ಕೂ ಮೊದಲು 5000ಕ್ಕೂ ಹೆಚ್ಚು ಶಂಕಿತರ ಡಿಎನ್ಎ ಪರೀಕ್ಷೆಯನ್ನು ಪೊಲೀಸರು ನಡೆಸಿದ್ದರು. ಆದರೆ ಯಾವುದೂ ತಾಳೆ ಬಂದಿರಲಿಲ್ಲ.

ಖುರೇಷಿಯ ಡಿಎನ್ಎ ಮಾದರಿಯನ್ನು ತಾಳೆ ಮಾಡಿದಾಗ ಪಾಸಿಟಿವ್ ಬಂತು. 9 ವರ್ಷದ ಬಾಲಕಿಯ ಅತ್ಯಾಚಾರ- ಕೊಲೆ ಪ್ರಕರಣದ ರೂವಾರಿ ಈತನೇ ಎಂಬುದು ಅಲ್ಲಿಗೆ ಸಾಬೀತಾಗಿತ್ತು. ಪೊಲೀಸ್ ಭಾಷೆಯಲ್ಲಿ ಮತ್ತಷ್ಟು ವಿಚಾರಣೆ ನಡೆಸಿದಾಗ 6 ವರ್ಷದ ಬಾಲಕಿಯ ಅತ್ಯಾಚಾರ ನಡೆಸಿದ್ದೂ ನಾನೇ ಎಂದು ಖುರೇಷಿ ತಪ್ಪೊಪ್ಪಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...