alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟರ್ ನಲ್ಲಿ ಸದ್ದು ಮಾಡ್ತಿದೆ ಕಳ್ಳನ ಕೈಚಳಕದ ವಿಡಿಯೋ…!

ಮುಂಬೈ ಪೊಲೀಸರು ಟ್ವಿಟರ್ ನಲ್ಲಿ ಹಾಕಿದ ವಿಡಿಯೋ ಭಾರಿ ಸದ್ದು ಮಾಡ್ತಾ ಇದೆ. ಜೇಬುಗಳವು ಮಾಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಈ ದೃಶ್ಯವನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ.

ಈ ಮೂಲಕ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗುವುದರ ಜೊತೆಗೆ ಕಳ್ಳರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ದೃಶ್ಯದಲ್ಲಿ ಓರ್ವ ಕಿಸೆಗಳ್ಳ, ತನ್ನ ಮುಂದೆ ನಿಂತಿದ್ದ ವ್ಯಕ್ತಿಯ ಹಿಂಬದಿ ಜೇಬಿನಲ್ಲಿದ್ದ ಪರ್ಸ್ ಗೆ ಕನ್ನ ಹಾಕುತ್ತಾನೆ. ನಂತರ ತನ್ನ ಬಲಗಡೆ ನೋಡಿದ ಕಳ್ಳನಿಗೆ ಸಿಸಿ ಟಿ.ವಿ. ಕ್ಯಾಮೆರಾ ಅಳವಡಿಸಿರೋದು ಕಣ್ಣಿಗೆ ಬೀಳುತ್ತದೆ.

ಇದ್ರಿಂದ ಎಚ್ಚೆತ್ತ ಕಳ್ಳ, ಪರ್ಸ್ ಅನ್ನು ಹಿಂತಿರುಗಿಸಿದ್ದಾನೆ. ಈ 22 ಸೆಕೆಂಡ್ ಗಳ ದೃಶ್ಯ ನೋಡಲು ಮನೋರಂಜನೆ ನೀಡಿದ್ರು ಕಳ್ಳರಿಗೆ ಎಚ್ಚರಿಕೆಯನ್ನೂ ರವಾನಿಸಿದೆ. ನೀವು ಎಲ್ಲೇ ಇರಿ ನಿಮ್ಮ ಮೇಲೆ ನಮ್ಮ ಕಣ್ಣು ಸದಾ ಇರುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಈ ದೃಶ್ಯವನ್ನು ಟ್ವಿಟರ್ ನಲ್ಲಿ ಹಾಕುತ್ತಿದ್ದಂತೆ 2200 ಲೈಕ್ ಸಿಕ್ಕಿದ್ದು, 700 ಜನ ಈ ವಿಡಿಯೋವನ್ನು ರೀ-ಟ್ವೀಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...