alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ಪೊಲೀಸ್ ಕಮೀಷನರ್ ಆಗಿ 7 ವರ್ಷದ ಬಾಲಕ…!

ಕ್ಯಾನ್ಸರ್ ಪೀಡಿತ 7 ವರ್ಷದ ಬಾಲಕನ ಕನಸನ್ನು ಮುಂಬೈ ಪೊಲೀಸರು ನನಸು ಮಾಡಿದ್ದಾರೆ. ಅರ್ಪಿತ್ ಮಂಡಲ್ ಎಂಬ ಈ ಬಾಲಕನಿಗೆ ತಾನೊಬ್ಬ ಪೊಲೀಸ್ ಅಧಿಕಾರಿಯಾಗಿ, ಜನಸೇವೆ ಮಾಡಬೇಕು ಅನ್ನೋ ಆಸೆ. ಆದ್ರೆ ಕ್ಯಾನ್ಸರ್ ಅನ್ನೋ ಮಾರಕ ಖಾಯಿಲೆ ಅವನನ್ನು ಆವರಿಸಿಕೊಂಡಿದೆ.

ಆದ್ರೂ ಅರ್ಪಿತ್ ಧೈರ್ಯಗೆಟ್ಟಿರಲಿಲ್ಲ. ಬಾಲಕನ ಬಗ್ಗೆ ತಿಳಿದ ಮುಲುಂದ್ ಠಾಣೆಯ ಪೊಲೀಸರು, ಒಂದು ದಿನದ ಮಟ್ಟಿಗೆ ಆತನನ್ನು ಇನ್ಸ್ ಪೆಕ್ಟರ್ ಮಾಡಿದ್ದರು. ಖಾಕಿ ತೊಟ್ಟಿದ್ದ ಪುಟಾಣಿ ಅರ್ಪಿತ್ ಗೆ ಈ ಮೂಲಕ ಪೊಲೀಸರು ಗೌರವ ಸೂಚಿಸಿದ್ದಾರೆ.

ಅರ್ಪಿತ್ ಖಾಕಿಧಾರಿಯಾಗಿ ಸೆಲ್ಯೂಟ್ ಹೊಡೆಯುತ್ತಿರುವುದು ಹಾಗೂ ಇನ್ಸ್ ಪೆಕ್ಟರ್ ಕುರ್ಚಿಯಲ್ಲಿ ಕುಳಿತಿರೋ ಫೋಟೋಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ. ಪೊಲೀಸರು ಬಾಲಕನಿಗೆ ಸಿಹಿ ನೀಡಿ ಸತ್ಕರಿಸಿದ್ದಾರೆ. ಪುಟಾಣಿಯ ಕನಸನ್ನು ಈಡೇರಿಸಿದ ಪೊಲೀಸರ ಸಹೃದಯತೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...