alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿಯನ್ನು ಕಾಪಾಡಿದ ಮುಂಬೈ ಪೊಲೀಸರು

ಪೊಲೀಸರೆಂದರೆ ಜನಸಾಮಾನ್ಯರಲ್ಲಿ ಭಯ. ಕಠಿಣ ಹೃದಯಿಗಳೆಂಬ ಅಭಿಪ್ರಾಯ ಸಾಮಾನ್ಯ. ಆದರೆ ಎಷ್ಟೋ ಸಂದರ್ಭದಲ್ಲಿ ಪೊಲೀಸರು ತುಂಬಾ ಮೃದು ಹೃದಯಿಗಳಾಗುತ್ತಾರೆ. ಎಷ್ಟೋ ಜನರ ಜೀವವನ್ನು ಕಾಪಾಡುತ್ತಾರೆ. ಇದಕ್ಕೆ ಉದಾಹರಣೆಯಾಗಿ ಮುಂಬೈ ಪೊಲೀಸರು ಮನೆಯಿಲ್ಲದ ನಿರಾಶ್ರಿತೆ ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ ಆಕೆಯನ್ನು ಕಾಪಾಡಿದ್ದಾರೆ.

ಘಾಟ್ಕೋಪರ್ ಎಂಬಲ್ಲಿ ಮನೆಯಿಲ್ಲದ ಅಪರಿಚಿತ ಮಹಿಳೆಯೊಬ್ಬಳು ಹೆರಿಗೆ ನೋವಿನಿಂದ ಬಳಲುತ್ತಿರುವುದಾಗಿ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಬಂದಾಕ್ಷಣ ಮಹಿಳಾ ಸಿಬ್ಬಂದಿಯೊಂದಿಗೆ ಮುಂಬೈ ಪೊಲೀಸರು ದೌಡಾಯಿಸಿದ್ದಾರೆ.

ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು, ಕೆಲ ಹೊತ್ತಿನಲ್ಲೇ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ, ಮಗು ಕ್ಷೇಮವಾಗಿದ್ದಾರೆ. ಆಕೆ ಹೆಸರು ಅಂಬಾ ಎಂಬುದಾಗಿ ತಿಳಿದುಬಂದಿದ್ದು, ಪೊಲೀಸರು ಆಕೆಯ ಕುಟುಂಬವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...