alex Certify
ಕನ್ನಡ ದುನಿಯಾ       Mobile App
       

Kannada Duniya

ಮುದ್ದು ನಾಯಿಮರಿಗಳಿಗಾಗಿಯೇ ಸಿದ್ಧವಾಗಿದೆ ರೆಸ್ಟೋರೆಂಟ್

ರೆಸ್ಟೋರೆಂಟ್ ಹಾಗೂ ಕೆಫೆಗಳಲ್ಲಿ ಹುಟ್ಟುಹಬ್ಬದ ಪಾರ್ಟಿಗಳನ್ನು ಆಚರಿಸೋದು ಸಾಮಾನ್ಯ. ಆದ್ರೆ ನಿಮ್ಮ ಮುದ್ದು ನಾಯಿಮರಿಗಳ ಹುಟ್ಟುಹಬ್ಬವನ್ನೂ ರೆಸ್ಟೋರೆಂಟ್ ನಲ್ಲಿ ಮಾಡಬಹುದು. ನಾಯಿ ತನ್ನ ಸ್ನೇಹಿತರ ಜೊತೆ ಪಾರ್ಟಿ ಎಂಜಾಯ್ ಮಾಡಬಹುದು. ಇಂಥಹದ್ದೊಂದು ಅವಕಾಶವನ್ನು ಮುಂಬೈನ ರೆಸ್ಟೋರೆಂಟ್ ಒಂದು ನೀಡ್ತಿದೆ.

ಮುಂಬೈನ ಅಂಧೇರಿಯಲ್ಲಿರುವ ಪೆಫೆ ಹೆಸರಿನ ರೆಸ್ಟೋರೆಂಟ್ ನಲ್ಲಿ ನಾಯಿಗಳ ಹುಟ್ಟುಹಬ್ಬ ಆಚರಿಸಬಹುದಾಗಿದೆ. ನಾಯಿಗಳಿಗಾಗಿಯೇ ವಿಶೇಷ ವ್ಯವಸ್ಥೆ ಮಾಡಲಾಗಿದೆ. ನಾಯಿಗಳಿಗೆ ವಿಶೇಷ ತಿನಿಸುಗಳನ್ನು ಸಿದ್ಧಪಡಿಸುವ ರೆಸ್ಟೋರೆಂಟ್, ಬೇರೆ ನಾಯಿಗಳ ಜೊತೆ ಸಮಯ ಕಳೆಯಲು ಹಾಗೂ ಆಟವಾಡಲು ಅವಕಾಶ ನೀಡುತ್ತದೆ.

ಟೇಬಲ್ ನಿಂದ ಹಿಡಿದು ಎಲ್ಲ ವ್ಯವಸ್ಥೆಯನ್ನು ನಾಯಿಗಳಿಗಾಗಿಯೇ ಸಿದ್ಧಪಡಿಸಲಾಗಿದೆ. ಮಾಲೀಕರ ಜೊತೆ ಕುಳಿತುಕೊಳ್ಳಲು ವಿಶೇಷ ಖುರ್ಚಿ ಹಾಕಲಾಗಿದೆ. ದಿನವೂ ಇಲ್ಲಿಗೆ 100ಕ್ಕಿಂತ ಹೆಚ್ಚು ನಾಯಿಗಳು ಬರ್ತವಂತೆ. ವೀಕೆಂಡ್ ನಲ್ಲಿ ಸಂಖ್ಯೆ ಹೆಚ್ಚಿರುತ್ತದೆ. ಹಾಗಾಗಿ ಅಡ್ವಾನ್ಸ್ ಬುಕ್ಕಿಂಗ್ ನಡೆಯುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...