alex Certify
ಕನ್ನಡ ದುನಿಯಾ       Mobile App
       

Kannada Duniya

ಸುರಿವ ಮಳೆಯಲ್ಲಿ ಗಿಡಗಳಿಗೆ ನೀರುಣಿಸಿದ ಶಾಸಕ

mumbai-mla-waters-plant-in-rains_kapsology-twitter_759

ಶಾಸಕರೊಬ್ಬರು ತಮಗಿರುವ ಪರಿಸರ ಕಾಳಜಿಯನ್ನು ಮೆರೆಯಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ. ಸುರಿಯುವ ಮಳೆಯಲ್ಲಿ ಛತ್ರಿಯಡಿಯಲ್ಲಿ ನಿಂತು ಗಿಡಗಳಿಗೆ ನೀರುಣಿಸಿದ್ದು, ಈ ಫೋಟೋ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಶೇರ್ ಆಗುತ್ತಿದ್ದಂತೆಯೇ ಟ್ವಿಟ್ಟಾರ್ಥಿಗಳು ಬಿದ್ದು ಬಿದ್ದು ನಗುತ್ತಿದ್ದಾರೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮಿರಾ ಬಯ್ಯಾಂದರ್ ಕ್ಷೇತ್ರದ ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಸುರಿಯುವ ಮಳೆಯಲ್ಲಿ ಗಿಡಗಳಿಗೆ ನೀರು ಹಾಕುವ ಮೂಲಕ ಗೇಲಿಗೊಳಗಾಗಿದ್ದಾರೆ. ಕಪಿಲ್ ಎಂಬವರು ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡುತ್ತಿದ್ದಂತೆಯೇ ಕ್ಷಣಾರ್ಧದಲ್ಲೇ ಇತರೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.virar-vasai-mayor

ಸುರಿಯುವ ಮಳೆಯಲ್ಲಿ ಗಿಡಗಳಿಗೆ ನೀರು ಹಾಕಿದ ಇಂತಹ ಶಾಸಕರನ್ನು ಪಡೆದ ನಾವು ಧನ್ಯರು ಎಂದು ಕೆಲವರು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದಾರೆ. ಕಳೆದ ವರ್ಷವೂ ಇಂತದ್ದೇ ಫೋಟೋವೊಂದು ವೈರಲ್ ಆಗಿತ್ತು. ಮುಂಬೈನ ವಸೈ-ವಿಹಾರ್ ನ ಮೇಯರ್ ಪ್ರವೀಣಾ ಠಾಕೂರ್ ಕೂಡಾ ಮಳೆ ಸುರಿಯುತ್ತಿರುವ ವೇಳೆ ಛತ್ರಿಯಡಿ ನಿಂತು ಗಿಡಗಳಿಗೆ ನೀರು ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...