alex Certify
ಕನ್ನಡ ದುನಿಯಾ       Mobile App
       

Kannada Duniya

ಅತೃಪ್ತ ಶಾಸಕರ ಗುಂಪಿನಲ್ಲಿ ಹೆಚ್ಚಾಯ್ತು ಜೋಶ್, ಕಾರಣ ಗೊತ್ತಾ…?

ಮುಂಬೈ: ರಾಜೀನಾಮೆ ನೀಡಿ ಮುಂಬೈನಲ್ಲಿ ತಂಗಿರುವ ಅತೃಪ್ತ ಶಾಸಕರು ಆತಂಕದಲ್ಲೇ ಇದ್ದರು. ವಿಪ್ ಜಾರಿ, ಸ್ಪೀಕರ್ ತೀರ್ಮಾನ, ಸುಪ್ರೀಂಕೋರ್ಟ್ ತೀರ್ಪು, ಶಾಸಕರ ಮನವೊಲಿಕೆ ಪ್ರಯತ್ನ ಮೊದಲಾದ ಕಾರಣದಿಂದಾಗಿ ಆತಂಕದಲ್ಲೇ ಇದ್ದ ಶಾಸಕರಲ್ಲಿ ಇಂದು ಹೊಸ ಹುರುಪು ಮೂಡಿದೆ.

ನಿನ್ನೆ ಎಂಟಿಬಿ ನಾಗರಾಜ್ ಮನವೊಲಿಸುವಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಇದರಿಂದಾಗಿ ಆತಂಕದಲ್ಲಿದ್ದ ಮುಂಬೈನಲ್ಲಿರುವ ಬಂಡಾಯ ಶಾಸಕರಿಗೆ ಇಂದು ಸಿಹಿ ಸುದ್ದಿ ಸಿಕ್ಕಿದೆ.

ಮನವೊಲಿಕೆಯಿಂದ ರಾಜೀನಾಮೆ ವಾಪಸ್ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದ್ದ ಎಂಟಿಬಿ ನಾಗರಾಜ್ ಅತೃಪ್ತ ಶಾಸಕರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇನ್ನು ದೆಹಲಿಯಲ್ಲಿರುವ ಶಾಸಕ ಕೆ. ಸುಧಾಕರ್ ಕೂಡ ರಾತ್ರಿ ವೇಳೆಗೆ ಮುಂಬೈಗೆ ತಲುಪಲಿದ್ದಾರೆ.

ಡಿಕೆಶಿ ಸಹೋದರರ ಒತ್ತಡಕ್ಕೆ ಮಣಿಯದ ಶಾಸಕ ಮುನಿರತ್ನ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ನಿನ್ನೆಯ ಬೆಳವಣಿಗೆಗಳಿಂದ ಆತಂಕಗೊಂಡಿದ್ದ ಮುಂಬೈನಲ್ಲಿರುವ ಬಂಡಾಯ ಶಾಸಕರು ಇಂದು ಮುನಿರತ್ನ, ಎಂಟಿಬಿ ನಾಗರಾಜ್ ಮತ್ತು ಸುಧಾಕರ್ ತಮ್ಮ ತಂಡ ಸೇರಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊಸ ಹುರುಪಿನಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಾಜ್ಯ ಸರ್ಕಾರ ಪತನಗೊಳಿಸುವ ಪ್ರಯತ್ನದ ಹಿಂದಿದೆಯಾ ಬಿಜೆಪಿ ನಾಯಕರ ಪಾತ್ರ...?

    View Results

    Loading ... Loading ...