alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಗೆಳತಿ ಹಾಕಿದ ಪಂಗನಾಮಕ್ಕೆ ಈತ ಕಂಗಾಲು

ಇಂಟರ್ನೆಟ್‌ನಲ್ಲೇ ಪರಿಚಯವಾಗಿದ್ದ ವಿದೇಶದ ಗೆಳತಿಯೊಬ್ಬಳು ಮುಂಬೈನ ವ್ಯಕ್ತಿಯೋರ್ವರಿಗೆ 9.4 ಲಕ್ಷ ರೂ. ಪಂಗನಾಮ ಹಾಕಿರುವ ಘಟನೆ ನಡೆದಿದೆ.

ಮುಂಬೈನ ಹೊರವಲಯ ಕಂಡಿವಿಲಿಯಲ್ಲಿ ಕೋಚಿಂಗ್ ಕ್ಲಾಸ್ ನಡೆಸುವ 65ರ ಹರೆಯವ ಈ ವ್ಯಕ್ತಿಗೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ಈಗ್ಗೆ 3 ತಿಂಗಳ ಹಿಂದೆ ಸ್ನೇಹಿತೆಯಾಗುತ್ತಾಳೆ. ತಾನು ಜೋರ್ಡನ್‌ನಲ್ಲಿ ಸಲೂನ್ ನಡೆಸುತ್ತಿದ್ದೇನೆ, ತನ್ನ ಹೆಸರು ಲಿಯೋನಿ ಎಂದು ಪರಿಚಯ ಮಾಡಿಕೊಂಡಿದ್ದಳು.

ಅದೊಂದು ದಿನ ಅಮಿತ್ ಎಂಬಾತ ಈ ವ್ಯಕ್ತಿಗೆ ಕರೆ ಮಾಡಿ, ಲಿಯೋನಿ ದೆಹಲಿ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್‌ ಅಧಿಕಾರಿಗಳ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಆಕೆ 70,000 ಡಾಲರ್ ಹೊತ್ತೊಯ್ಯುತ್ತಿದ್ದಳು ಎಂಬ ಕಾರಣಕ್ಕೆ ಆಕೆಯನ್ನು ತಡೆದು ನಿಲ್ಲಿಸಿದ್ದಾರೆ. ಬಿಡಿಸಿಕೊಳ್ಳಲು ತುರ್ತಾಗಿ 24,000 ರೂ. ಬೇಕು. ನಂತರ ಹಣ ಮರಳಿಸುತ್ತಾಳೆ, ಆಕೆಯ ಅಕೌಂಟ್‌ಗೆ ಹಣ ಹಾಕಿ ಎಂದು ಕರೆ ಮಾಡಿದ. ಇದನ್ನು ನಂಬಿ ಈ ವ್ಯಕ್ತಿ ಹಣ ಹಾಕಿದ್ದಾರೆ.

ಮುಂದಿನ ಮೂರು ತಿಂಗಳಲ್ಲಿ ಹೀಗೆ ಆಗಾಗ ಹಣಕ್ಕಾಗಿ ಬೇರೆ ಬೇರೆ ರೀತಿಯ ಸಂಕಷ್ಟದ ಕಥೆಯೊಂದಿಗೆ ಕರೆಗಳು ಬರುತ್ತಲೇ ಇದ್ದವು. ಇವರು ಕರುಣೆಯಿಂದ ಹಣ ಕೊಡುತ್ತಲೇ ಇದ್ದರು. ಕೊನೆಗೆ ತಾನು ಮೋಸ ಹೋಗುತ್ತಿದ್ದೇನೆ ಎಂಬುದು ಇವರಿಗೆ ಅರಿವಾಗುವ ಹೊತ್ತಿಗೆ 9.4 ಲಕ್ಷ ರೂ. ಇವರ ಕೈಜಾರಿಯಾಗಿತ್ತು. ಈಗ ಅಮಿತ್ ಎಂಬಾತನ ಫೋನ್‌ ಗೆ ಕರೆ ಮಾಡಿದರೆ ಸ್ವಿಚ್ ಆಫ್ ಬರುತ್ತಿದೆ. ಕಂಗಾಲಾದ ಈ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರೀಗ ತನಿಖೆ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...