alex Certify
ಕನ್ನಡ ದುನಿಯಾ       Mobile App
       

Kannada Duniya

25 ಸೆಕೆಂಡ್ ಗಳಲ್ಲಿ ಒಂದು ಬಾಟಲಿ ಕೆಚಪ್ ಕುಡಿದ ಭೂಪ

ವಿಶ್ವ ದಾಖಲೆ ಮಾಡೋದ್ರಲ್ಲಿ ಭಾರತೀಯರು ಯಾರಿಗೂ ಕಮ್ಮಿಯಿಲ್ಲ. ಜಗತ್ತಿನ ಅತಿದೊಡ್ಡ ಕಾಂಡೋಮ್ ತಯಾರಿಸುವುದರಿಂದ ಹಿಡಿದು ದೇಹದ ಮೇಲೆ ಅತಿ ಹೆಚ್ಚು ಧ್ವಜಗಳ ಟ್ಯಾಟೂ ಹಾಕಿಸಿಕೊಳ್ಳುವವರೆಗೆ ಪ್ರತಿಯೊಂದರಲ್ಲೂ ದಾಖಲೆ ಮಾಡ್ತಾನೇ ಇದ್ದಾರೆ.

ಇದೀಗ ಮುಂಬೈನ ವ್ಯಕ್ತಿಯೊಬ್ಬ ವಿಶಿಷ್ಟ ಗಿನ್ನಿಸ್ ದಾಖಲೆ ಮಾಡಿದ್ದಾನೆ. ಕೇವಲ 25.37 ಸೆಕೆಂಡ್ ಗಳಲ್ಲಿ ಒಂದು ಬಾಟಲಿ ಕೆಚಪ್ ಕುಡಿದಿದ್ದಾನೆ. ದಿನೇಶ್ ಶಿವಂತ್ ಉಪಾಧ್ಯಾಯ ಈ ವಿಚಿತ್ರ ಗಿನ್ನಿಸ್ ದಾಖಲೆಗೆ ಪಾತ್ರನಾಗಿದ್ದಾನೆ. ಗಿನ್ನಿಸ್ ಅಧಿಕಾರಿಗಳು ಈ ವಿಡಿಯೋವನ್ನು ಯುಟ್ಯೂಬ್ ನಲ್ಲಿ ಶೇರ್ ಮಾಡಿದ್ದಾರೆ.

396 ಗ್ರಾಂ ಟೊಮೆಟೋ ಸಾಸ್ ಇರುವ ಬಾಟಲಿಯಲ್ಲಿ ಸ್ಟ್ರಾ ಹಾಕಿಕೊಂಡು ಅರ್ಧ ನಿಮಿಷಕ್ಕೂ ಮೊದಲೇ ಅದನ್ನು ದಿನೇಶ್ ಖಾಲಿ ಮಾಡಿದ್ದಾರೆ. ದ್ರಾಕ್ಷಿ ಹಣ್ಣನ್ನು ಅತ್ಯಂತ ವೇಗವಾಗಿ ತಿಂದಿರುವ ವಿಶ್ವದಾಖಲೆ ಕೂಡ ದಿನೇಶ್ ಉಪಾಧ್ಯಾಯ ಹೆಸರಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...