alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನಾಕೆ ’ಅವಳಲ್ಲ ಅವನು’ ಎಂದು ತಿಳಿದು ಶಾಕ್ ಆದ ಯುವಕ

ಮುಂಬೈನ ಯಾಮಿನ್ ಸೈಯದ್ ಎಂಬ 22 ವರ್ಷದ ಯುವಕ ತಾನೋದುತ್ತಿದ್ದ ಕಾಲೇಜಿನಲ್ಲಿಯೇ ಹುಡುಗಿಯೊಬ್ಬಳ ಸ್ನೇಹ ಮಾಡಿ, ಸ್ನೇಹ ಪ್ರೀತಿಗೆ ತಿರುಗಿ, ವಿವಾಹವಾಗಿ ಈಗ ಹನಿಮೂನ್ ಗೆಂದು ಕರೆದುಕೊಂಡು ಹೋದಾಗ ಗೊತ್ತಾಗಿದೆ ಆಕೆ ’ಅವಳಲ್ಲ, ಅವನು’ ಎಂದು.

ಮುಂಬೈನ ಗೋವಂಡೀ ಪ್ರದೇಶದ ನಿವಾಸಿ ಯಾಮೀನ್, ತನ್ನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಈ ವಿವಾಹಕ್ಕೆ ಎರಡೂ ಕುಟುಂಬದವರ ಒಪ್ಪಿಗೆಯೂ ಇತ್ತು. ಮದುವೆಯಾದ ನಂತರ ನವ ದಂಪತಿ ಹನಿಮೂನ್ ಗೆ ಹೋಗಿದ್ದಾರೆ. ಅಲ್ಲಿ ತಾನು ಮದುವೆಯಾಗಿದ್ದು ಹುಡುಗಿಯನ್ನಲ್ಲ, ಹುಡುಗ ಎಂಬ ಸತ್ಯ ಯಾಮೀನ್ ಗೆ ತಿಳಿದಿದೆ. ಇದರಿಂದ ಶಾಕ್ ಆದ ವರ ಮನೆಯವರಿಗೆ ಹೇಳಿದ್ದಾನೆ. ವಿಷಯ ಕೇಳಿ ಎಲ್ಲರೂ ದಂಗಾಗಿದ್ದಾರೆ.

ಈಗ ಯಾಮೀನ್ ಸೈಯದ್ ಕುಟುಂಬದವರು ತಮ್ಮ ಮಗನಿಗೆ ಮೋಸವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಶಿವಾಜಿ ನಗರ ಠಾಣೆ ಪೊಲೀಸರು ಹುಡುಗಿ ಕುಟುಂಬಸ್ಥರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...