alex Certify
ಕನ್ನಡ ದುನಿಯಾ       Mobile App
       

Kannada Duniya

ಜೆಟ್ ಏರ್ವೇಸ್ ನಲ್ಲಿ ಆಹಾರದ ಜೊತೆ ಜಿರಲೆ ಫ್ರೀ..!

man-served-cockroach-on-flig

ಮುಂಬೈ: ರೈಲು ಹಾಗೂ ವಿಮಾನದಲ್ಲಿ ಸರ್ವ್ ಮಾಡಿದ ಆಹಾರದಲ್ಲಿ ಕೆಲವೊಮ್ಮೆ ಹುಳ, ಜಿರಲೆ ಸಿಕ್ಕಿದ ಹಲವು ಘಟನೆಗಳು ನಡೆದಿವೆ. ಅಂತಹ ಮತ್ತೊಂದು ಘಟನೆಯ ವರದಿ ಇಲ್ಲಿದೆ ನೋಡಿ. ವಿಮಾನದಲ್ಲಿ ಸರ್ವ್ ಮಾಡಿದ ಆಹಾರದಲ್ಲಿದ್ದ ಜಿರಲೆ ಕಂಡು ಬಂದ ಘಟನೆ ಮುಂಬೈನಲ್ಲಿ ನಡೆದಿದೆ.

ಜೆಟ್ ಏರ್ ವೇಸ್ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಆಕಸ್ಮಿಕವಾಗಿ ಜಿರಲೆ ಇದ್ದ ಆಹಾರ ನೀಡಲಾಗಿತ್ತು. ಇದನ್ನು ತಿಂದ ಪ್ರಯಾಣಿಕ ಅಸ್ವಸ್ಥಗೊಂಡಿದ್ದಾರೆ. ಬ್ಯುಸಿನೆಸ್ ಕ್ಲಾಸ್ ನಲ್ಲಿ ಜೆಟ್ ಏರ್ ವೇಸ್ ನಲ್ಲಿ ಪ್ರಯಾಣಿಸುತ್ತಿದ್ದ ಬಿರ್ಜು ಎಂಬ ಪ್ರಯಾಣಿಕನಿಗೆ ಉಪಹಾರ ನೀಡಲಾಗಿದ್ದು, ಚನ್ನಾ ಮಸಾಲದಲ್ಲಿ ಜಿರಲೆ ಕೂಡ ಇತ್ತೆನ್ನಲಾಗಿದೆ. ಇದನ್ನು ಸೇವಿಸಿದ್ದ ಬಿರ್ಜು ಅಸ್ವಸ್ಥರಾಗಿದ್ದಾರೆ. ಅವರ ಬಳಿ ಕ್ಷಮೆ ಕೋರಿದ ಜೆಟ್ ವೇಸ್ ವಿಮಾನದ ಸಿಬ್ಬಂದಿ, ಬಿರ್ಜು ಅವರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ.

ಕೆಲಸದ ನಿಮಿತ್ತ ಬಿರ್ಜು ಮುಂಬೈನಿಂದ ರಾಜ್ ಕೋಟ್ ಗೆ ಜೆಟ್ ಏರ್ ವೇಸ್ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಬಿರ್ಜು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...