alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈನ ಈ ವ್ಯಕ್ತಿ ಪ್ರತಿನಿತ್ಯ ಮಾಡುತ್ತಿದ್ದಾರೆ ಇಂತ ಕೆಲಸ

ಮುಂಬೈನ 31 ವರ್ಷದ ಗಿರೀಶ್ ಪಾಟೀಲ್ ಕಳೆದ 45 ದಿನಗಳಿಂದ ಮಾಡುತ್ತಿರುವ ಕೆಲಸವೊಂದು ಸಾರ್ವಜನಿಕರಿಂದ ಪ್ರಶಂಸೆಗೊಳಗಾಗಿದೆ.

ಗಿರೀಶ್ ಪ್ರತಿನಿತ್ಯ ಗೋದ್ ಬಂದರ್ ರಸ್ತೆಯ ಬ್ಯುಸಿ ಟ್ರಾಫಿಕ್ ನಲ್ಲಿ ಫ್ಲೇ ಕಾರ್ಡ್ ವೊಂದನ್ನು ಹಿಡಿದು ನಿಲ್ಲುತ್ತಿದ್ದು, ವಾಹನ ಸವಾರರು ಸಿಗ್ನಲ್ ಬಿದ್ದ ವೇಳೆ ಜೀಬ್ರಾ ಕ್ರಾಸಿಂಗ್ ಬಿಟ್ಟು ತಮ್ಮ ವಾಹನಗಳನ್ನು ನಿಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ.

ಆನಂದ್ ನಗರ್ ಸಿಗ್ನಲ್ ನಲ್ಲಿ ಜೀಬ್ರಾ ಕ್ರಾಸಿಂಗ್ ಇದ್ದರೂ ವಾಹನ ಸವಾರರು ಅದರ ಮೇಲೆಯೇ ತಮ್ಮ ವಾಹನ ನಿಲ್ಲಿಸುತ್ತಿದ್ದ ಪರಿಣಾಮ ಪಾದಚಾರಿಗಳಿಗೆ ರಸ್ತೆ ದಾಟಲು ಕಷ್ಟವಾಗಿತ್ತು. ತಮ್ಮ ಮಗಳನ್ನು ಪ್ರತಿನಿತ್ಯ ಶಾಲೆಗೆ ಬಿಡಲು ಕರೆದುಕೊಂಡು ಹೋಗುತ್ತಿದ್ದ ಗಿರೀಶ್ ಪಾಟೀಲ್, ಇದನ್ನು ಗಮನಿಸಿ ವಾಹನ ಸವಾರರಿಗೆ ತಿಳಿ ಹೇಳಲು ಈ ಕಾರ್ಯ ಮಾಡುತ್ತಿದ್ದಾರೆ.

ಗಿರೀಶ್ ಪಾಟೀಲ್ ಅವರ ಕಾರ್ಯವನ್ನು ಶ್ಲಾಘಿಸಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಅವರ ಪೋಟೋ ಸಮೇತ ಪೋಸ್ಟ್ ಮಾಡಿದ್ದು, ಇದಕ್ಕೆ ಈಗ ಇನ್ನಷ್ಟು ಮಂದಿ ಹಿರಿಯರು ಕೈ ಜೋಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...