alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಬಿಟ್ಟು ಹೋದ್ಲು ಗರ್ಭಿಣಿ ಪತ್ನಿ, ದುಡುಕಿಬಿಟ್ಟ ಪತಿ

ಗರ್ಭಿಣಿಯಾಗಿದ್ದ ಪತ್ನಿ ಮನೆ ಬಿಟ್ಟು ಓಡಿ ಹೋಗಿದ್ದರಿಂದ ಮನನೊಂದು 25 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿರಾರ್ ನಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾನೆ. ಅಮಿತ್ ರತಾಂಶಿ ಪೋಕರ್ ಮೃತ ಯುವಕ.

ಇವನ ಪತ್ನಿ ಧರ್ಮಿಷ್ಠಾ 7 ತಿಂಗಳ ಗರ್ಭಿಣಿಯಾಗಿದ್ಲು. ಮಾರ್ಚ್ 9ರಿಂದ ನಾಪತ್ತೆಯಾಗಿದ್ದಾಳಂತೆ. ಇದರಿಂದ ಅಮಿತ್ ನೊಂದಿದ್ದ. ಆಕೆ ತನ್ನನ್ನು ಯಾಕೆ ಬಿಟ್ಟು ಹೋದ್ಲು ಅನ್ನೋದೇ ಅವನಿಗೆ ಅರ್ಥವಾಗಿರಲಿಲ್ಲ. ಈ ವಿಚಾರವನ್ನು ಧರ್ಮಿಷ್ಠಾಳ ಹೆತ್ತವರೊಂದಿಗೂ ಚರ್ಚಿಸಿದ್ದ.

ನಂತರ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದ ಅಮಿತ್, ತನ್ನ ಹೆತ್ತವರಿಗೆ 4 ನಿಮಿಷಗಳ ವಿಡಿಯೋ ಒಂದನ್ನು ಕಳಿಸಿದ್ದಾನೆ. ಅದರಲ್ಲಿ ತನ್ನ ಅಳಲು ತೋಡಿಕೊಂಡಿದ್ದಾನೆ. ಹೇಡಿಯಂತೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ, ನನ್ನನ್ನು ಕ್ಷಮಿಸಿ ಅಂತಾ ಕೇಳಿದ್ದಾನೆ. ನಂತರ ವೇಗವಾಗಿ ಬರುತ್ತಿದ್ದ ರೈಲಿನ ಎದುರು ಹಾರಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...