alex Certify
ಕನ್ನಡ ದುನಿಯಾ       Mobile App
       

Kannada Duniya

ಹಸಿದವರ ಹೊಟ್ಟೆ ತುಂಬಿಸಲು ನೆರವಾಯ್ತು ಆ ನಿರ್ಧಾರ

ಬದಲಾವಣೆ ಶುರುವಾಗೋದೇ ಒಂದು ಸಣ್ಣ ವಿಚಾರದಿಂದ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಮುಂಬೈನ ವಿಷಭ್ ಮೆಹ್ತಾ ಎಂಬುವವರ ಒಂದೇ ಒಂದು ಫೇಸ್ಬುಕ್ ಫೋಸ್ಟ್ ಈಗ ಹಸಿದವರ ಹೊಟ್ಟೆ ತುಂಬಿಸುತ್ತಿದೆ. ವಿಷಬ್ ಮಾಡಿದ್ದು ಸಾಮಾನ್ಯ ಅಂತ ಅನ್ನಿಸಿದರೂ ಅದರಲ್ಲೊಂದು ಹಿರಿಮೆ ಇದೆ.

ಕೆಲಸದ ನಿಮಿತ್ತ ವಿಷಭ್ ಮುಂಬೈನಿಂದ ಜೈಪುರಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಹೋಗಿಬರ್ತಿದ್ರು. ಆ ಪ್ರಯಾಣ ಅವರಿಗೆ ಹೊಸದೇನು ಆಗಿರಲಿಲ್ಲ. ಆದ್ರೆ ಪ್ರಯಾಣದ ಸಂದರ್ಭದಲ್ಲಿ ಅವರು ಒಂದು ತೀರ್ಮಾನಕ್ಕೆ ಬಂದರು. ವಿಮಾನದಲ್ಲಿ ಪ್ರಯಾಣಿಕರು ತಿನ್ನದೆ ಉಳಿಯುವಂತಾ ಆಹಾರ ಪದಾರ್ಥಗಳು ಕಸದ ಬುಟ್ಟಿ ಸೇರೋದಕ್ಕೆ ಬಿಡೋದಿಲ್ಲ. ಪ್ರಯಾಣಿಕರು ತಿಂದುಳಿದ ಅಥವಾ ತಿನ್ನದೆ ಉಳಿದ ಆಹಾರವನ್ನ ಹಸಿದವರಿಗೆ ತಲುಪಿಸ್ತೀನಿ ಅನ್ನೋ ಸಂಕಲ್ಪ ಮಾಡಿದ್ರು.

ತಮ್ಮ ನಿರ್ಧಾರವನ್ನ ಅವರು ವಿಮಾನದ ಸಿಬ್ಬಂದಿಗೂ ತಿಳಿಸಿದ್ರು. ಅವರಿಂದಲೂ ವಿಷಭ್ ಗೆ ಪಾಸಿಟೀವ್ ರೆಸ್ಪಾನ್ಸ್ ಸಿಕ್ಕಿತು. ಹೀಗೆ ರಿಷಬ್ ಸಂಗ್ರಹಿಸಿದ ಆಹಾರ ಪದಾರ್ಥದ ಪ್ರಮಾಣ ಎಷ್ಟು ಗೊತ್ತಾ..? 70 ಬರ್ಗರ್ ಬನ್ಸ್, 50 ಬೆಣ್ಣೆಯ ಪ್ಯಾಕೇಟ್ಸ್ ಮತ್ತು 30 ಪ್ಯಾಕ್ ಬಿಸ್ಕತ್ತುಗಳು. ಹೀಗೆ ಸಂಗ್ರಹಿಸಿದ ಆಹಾರವನ್ನ ವಿಷಭ್ ಅಜ್ಮೀರ್ ಮತ್ತು ಜೈಪುರದ ಮಾರ್ಗಮಧ್ಯೆ ಹಸಿದವರಿಗೆ ನೀಡಿದರಂತೆ. ಇದಕ್ಕೆ ಅಲ್ವಾ ಹೇಳೋದು ಅನ್ನದೇವರ ಮುಂದೆ ಇನ್ನು ದೇವರು ಉಂಟೇ ಅಂತಾ..!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...