alex Certify
ಕನ್ನಡ ದುನಿಯಾ       Mobile App
       

Kannada Duniya

ಟಿವಿ ಟವರ್ ಹತ್ತಿ ಕೂತಿದ್ದ ಭೂಪ

ದಕ್ಷಿಣ ಮುಂಬೈನ ವರ್ಲಿ ಪ್ರಾಂತ್ಯದಲ್ಲಿ ಒಬ್ಬ ವ್ಯಕ್ತಿ ಟಿವಿ ಟವರ್ ಹತ್ತಿ, ಮಾಧ್ಯಮದವರು ಬಂದ್ರೆ ಮಾತ್ರ ಕೆಳಗೆ ಇಳಿದು ಬರುವುದಾಗಿ ತಿಳಿಸಿ, ಪೊಲೀಸರನ್ನು ಸತಾಯಿಸಿದ ಘಟನೆ ನಡೆದಿದೆ.

ಟವರ್ ಏರಿದ ವ್ಯಕ್ತಿಯೇ ತನ್ನ ಮೊಬೈಲ್ ನಿಂದ ಪೊಲೀಸರಿಗೆ ಹಾಗೂ ಅಗ್ನಿ ಶಾಮಕ ಸಿಬ್ಬಂದಿಗೆ ಕಾಲ್ ಮಾಡಿ, ಟವರ್ ಏರಿರುವುದಾಗಿ ತಿಳಿಸಿದ್ದಾನೆ.

ಪೊಲೀಸರು ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು, ನಕಲಿ ಕ್ಯಾಮೆರಾ ಒಂದನ್ನು ತಂದು ಮೀಡಿಯಾದವರು ಬಂದಿದ್ದಾರೆ. ನೀನು ಕೆಳಗೆ ಇಳಿದು ಬಾ ಎಂದು ಕೇಳಿದ್ದಾರೆ. ಕ್ಯಾಮೆರಾ ನೋಡಿದ ವ್ಯಕ್ತಿ ಮಾಧ್ಯಮದವರೇ ಬಂದಿದ್ದಾರೆ ಎಂದು ತಿಳಿದು ಕೆಳಗೆ ಇಳಿದಿದ್ದಾನೆ.

ಟವರ್ ಏರಿ ಕುಳಿತಿದ್ದವನು ಓರ್ವ ಚಾಲಕ. ಕಳೆದ ತಿಂಗಳು ಆತ ಕೆಲಸ ಕಳೆದುಕೊಂಡಿದ್ದ. ಹೀಗಾಗಿ ತನ್ನ ಅಳಲನ್ನು ತೋಡಿಕೊಳ್ಳಲು ಈ ಮಾರ್ಗ ಅನುಸರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...