alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನೆಮಾ ಸ್ಟೈನಲ್ಲಿ ಕಳ್ಳನನ್ನು ಹಿಡಿದ ಸಾಹಸಿ

ಸಿನೆಮಾದ ಹೀರೋಗಳಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲೂ ವಿಲನ್ ಗಳನ್ನು ಮಟ್ಟಹಾಕುವ ಆ್ಯಕ್ಷನ್ ಹೀರೋಗಳು ಫೇವರಿಟ್. ಇದು ರೀಲ್ ನಲ್ಲಾಯ್ತು, ರಿಯಲ್ ಆಗಿಯೂ ಮುಂಬೈನ ವ್ಯಕ್ತಿಯೊಬ್ಬ ಇದೇ ರೀತಿಯ ಸಾಹಸ ಮಾಡಿದ್ದಾನೆ.

ಮುಂಬೈನ ಬೊರಿವಿಲಿಯಲ್ಲಿ 27 ವರ್ಷದ ಯಾಸಿನ್ ಧೋಬಿ ಎಂಬಾತ ಟ್ರಾಫಿಕ್ ಸಿಗ್ನಲ್ ನಲ್ಲಿ ನಿಲ್ಲಿಸಿದ್ದ ಕಾರ್ ನಲ್ಲಿದ್ದ ಬ್ಯಾಗ್ ಎಗರಿಸಿದ್ದ. ಆ ಬ್ಯಾಗ್ ನಲ್ಲಿ 5 ಲಕ್ಷ ರೂಪಾಯಿ ಇತ್ತು. ಬೆಳಗ್ಗೆ 11.20ರ ವೇಳೆಗೆ ನಡೆದ ಘಟನೆ ಇದು.

ಬ್ಯಾಗ್ ತೆಗೆದುಕೊಂಡು ಸ್ವಲ್ಪ ದೂರ ಓಡಿದ ಇಬ್ಬರು ಕಳ್ಳರು ಕೊನೆಗೆ ಆಟೋ ಏರಿದ್ದಾರೆ. ಬ್ಯಾಗ್ ಮಾಲೀಕ ಕಿರಣ್ ಮಖ್ವಾನಾ ಎಂಬಾತ ಕಳ್ಳರನ್ನು ಚೇಸ್ ಮಾಡಿಕೊಂಡು ಬಂದಿದ್ದ. ತಾನೂ ಕೂಡ ರಿಕ್ಷಾ ಏರಿ ಅವರನ್ನು ಹಿಡಿಯಲು ತೆರಳ್ತಾ ಇದ್ದ.

ಪೊಲೀಸರು ಹಾಗೂ ಸಾರ್ವಜನಿಕರು ಸಹ ಕಿರಣ್ ಗೆ ಸಾಥ್ ನೀಡಿದ್ರು. ಕೊನೆಗೂ ಆತ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ. ಯಾಸಿನ್ ಸಿಕ್ಕಿಬಿದ್ದಿದ್ದು, 5 ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ ಕಿರಣ್ ಗೆ ಮರಳಿ ಸಿಕ್ಕಿದೆ. ಯಾಸಿನ್ ಸಹಚರ ಪರಾರಿಯಾಗಿದ್ದಾನೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...