alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಸಹೋದ್ಯೋಗಿಗೆ ಡಾರ್ಲಿಂಗ್ ಹೇಳಿ ಜೈಲು ಸೇರಿದ…!

ಮಹಿಳಾ ಸಹೋದ್ಯೋಗಿಗೆ ಡಾರ್ಲಿಂಗ್ ಹೇಳಿದ 24 ವರ್ಷದ ಯುವಕನೊಬ್ಬ ಕಂಬಿ ಎಣಿಸುವಂತಾಗಿದೆ. ಯುವಕನ ವಿರುದ್ಧ 22 ವರ್ಷದ ಉದ್ಯೋಗಿ ದೂರು ನೀಡಿದ್ದಾಳೆ. ನಂತ್ರ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

ಮುಂಬೈನ ಸಾಕಿನಾಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೀಡಿತೆ ಹಾಗೂ ಆರೋಪಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದಾರೆ. ಆಗಸ್ಟ್ 6 ರಂದು ತರಬೇತಿ ವೇಳೆ ಡಾರ್ಲಿಂಗ್, ಅದನ್ನು ಕೊಡ್ತಿಯಾ ಎಂದು ಆರೋಪಿ ಕೇಳಿದ್ದನಂತೆ. ಅದಕ್ಕೆ ಉತ್ತರ ನೀಡದೆ ಹೋಗಿದ್ದ ಯುವತಿ, ಹಿರಿಯ ಸಿಬ್ಬಂದಿ ಜೊತೆ ಮಾತನಾಡಿದ್ದಾಳೆ. ಆಗಸ್ಟ್ 7 ರಂದು ಕ್ಷಮೆ ಕೇಳುವಂತೆ ಹಿರಿಯ ಸಿಬ್ಬಂದಿಗಳು ಸೂಚನೆ ನೀಡಿದ್ದಾರೆ. ಆದ್ರೆ ಆಗಸ್ಟ್ 8 ರಂದು ಮತ್ತೆ ಹಾಗೆ ನಡೆದುಕೊಂಡ ಸಹೋದ್ಯೋಗಿ ವಿರುದ್ಧ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...