alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾನ್ ಹೋಲ್ ನಲ್ಲಿ ಬಿದ್ದು ಸುಟ್ಟು ಕರಕಲಾದ ಬೈಕ್ ಸವಾರ

ಮುಂಬೈನಲ್ಲಿ ಬೈಕ್ ಸವಾರನೊಬ್ಬ ನಡು ರಸ್ತೆಯಲ್ಲೇ ಸಜೀವ ದಹನವಾಗಿದ್ದಾನೆ. ನಿಯಂತ್ರಣ ತಪ್ಪಿದ ಬೈಕ್ ಓಪನ್ ಮ್ಯಾನ್ ಹೋಲ್ ನಲ್ಲಿ ಬಿದ್ದಿದೆ, ತಕ್ಷಣ ಸ್ಪೋಟಗೊಂಡಿದೆ. 27 ವರ್ಷದ ಯುವಕ ಅಲ್ಲೇ ಸುಟ್ಟು ಕರಕಲಾಗಿದ್ದಾನೆ.

ದುರ್ಘಟನೆ ನಡೆದ ಸಂದರ್ಭದಲ್ಲಿ ಬೈಕ್ ಸವಾರ ಮದ್ಯ ಸೇವಿಸಿದ್ದ. ತಡರಾತ್ರಿ 12.30ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಆ ಸ್ಥಳದಲ್ಲಿ ಪೈಪ್ ಲೈಲ್ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಮ್ಯಾನ್ ಹೋಲ್ ನಲ್ಲಿ ಬಿದ್ದ ತಕ್ಷಣ ಬೈಕ್ ಗೆ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದ್ದರಿಂದ ಈ ದುರಂತ ನಡೆದಿದೆ.

ಪೊಲೀಸರು ಸ್ಥಳಕ್ಕೆ ಬಂದು ಬೈಕ್ ಹಾಗೂ ಯುವಕನನ್ನು ಮೇಲಕ್ಕೆತ್ತಿದ್ರು. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಆದ್ರೆ ಬೆಂಕಿಯಲ್ಲಿ ಬೆಂದು ಹೋಗಿದ್ದ ಯುವಕ ಅಷ್ಟರಲ್ಲಾಗ್ಲೇ ಮೃತಪಟ್ಟಿದ್ದ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...