alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಪೋಸ್ಟ್ ಗೆ ಕಮೆಂಟ್ ಮಾಡಿದ್ದಕ್ಕೆ ಪ್ರಕರಣದಿಂದ ಹಿಂದೆ ಸರಿದ ಜಡ್ಜ್

ಮುಂಬೈ: ವಕೀಲರು, ನ್ಯಾಯಾಧೀಶರೊಬ್ಬರ ಫೇಸ್‌ ಬುಕ್‌ ಪೋಸ್ಟ್‌ಗೆ ಕಮೆಂಟ್‌ ಮಾಡಿದ್ದಕ್ಕೆ, ಅವರ ಕೇಸಿನಿಂದ ನ್ಯಾಯಾಧೀಶರು ಹಿಂದೆ ಸರಿದು, ಬೇರೆಯವರಿಗೆ ವರ್ಗಾವಣೆ ಮಾಡಿದ್ದಾರೆ.

ಮೂರು ವರ್ಷದಿಂದ ಜಮೀನು ಇತ್ಯರ್ಥಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರು, ಆ ಪ್ರಕರಣದ ವಕೀಲರು ತಮ್ಮ ಫೇಸ್ ಬುಕ್ ಪೋಸ್ಟ್‌ಗೆ ಕಮೆಂಟ್‌ ಮಾಡಿರುವುದಕ್ಕೆ ಕೇಸಿನಿಂದ ಹಿಂದೆ ಸರಿದಿದ್ದಾರೆ. ವಕೀಲರ ಇಂತಹ ನಡವಳಿಕೆ ವೃತ್ತಿಯಲ್ಲಿನ ಅಶಿಸ್ತು ಎಂದು ಪರಿಗಣಿಸಲಾಗುತ್ತದೆ ಎಂದು ಕಾರಣ ನೀಡಿದ್ದಾರೆ.

ಆದರೆ ನ್ಯಾಯಾಧೀಶರ ಈ ನಿರ್ಧಾರಕ್ಕೆ ಅರ್ಜಿದಾರರು ಒಪ್ಪಿಗೆ ನೀಡದೆ, ಮೂರು ವರ್ಷದಿಂದ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವುದರಿಂದ, ಈ ಹಂತದಲ್ಲಿ ಬೇರೆ ನ್ಯಾಯಾಧೀಶರ ನೇಮಕಕ್ಕೆ ಸಮ್ಮತಿ ಇಲ್ಲ. ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೇಳಿಕೊಂಡಿದ್ದಾರೆ.

ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಸಂಬಂಧಿಕರೂ ಆಗಿದ್ದು, ನ್ಯಾಯಾಧೀಶರ ಸಾಮಾಜಿಕ ತಾಣದ ಖಾತೆಯಲ್ಲಿನ ಪೋಸ್ಟ್‌ ಒಂದಕ್ಕೆ ಕಮೆಂಟ್‌ ಮಾಡಿದ್ದಾರೆ. ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಇಂತಹದೊಂದು ಅಪರೂಪದ ಪ್ರಕರಣ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...