alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕದಿಂದ ಬಂದ ಮಗನಿಗಾಗಿದ್ದು ತಾಯಿಯ ಅಸ್ಥಿಪಂಜರ ದರ್ಶನ

closeup of the feet of a dead body covered with a sheet, with a blank tag tied on the big toe of his left foot, in monochrome, with a vignette added

ಮುಂಬೈನ ಒಶಿವರಾ ಅಪಾರ್ಟ್ ಮೆಂಟ್ ನಲ್ಲಿ 63 ವರ್ಷದ ಮಹಿಳೆ ಆಶಾ ಸಹಾನಿ ಎಂಬಾಕೆಯ ಅಸ್ಥಿಪಂಜರ ಪತ್ತೆಯಾಗಿದೆ. ಐಟಿ ವೃತ್ತಿಯಲ್ಲಿರುವ ಆಕೆಯ ಪುತ್ರ ರಿತುರಾಜ್ ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ರು. ಅಮೆರಿಕದಿಂದ ಮರಳುವಷ್ಟರಲ್ಲಿ ತಾಯಿ ಆಶಾ ಅಪಾರ್ಟ್ ಮೆಂಟ್ ನಲ್ಲೇ ಶವವಾಗಿ ಹೋಗಿದ್ರು.

2013ರಲ್ಲೇ ಆಶಾರ ಪತಿ ಕೇದಾರನಾಥ್ ಮೃತಪಟ್ಟಿದ್ರು. ಮಗ ಅಮೆರಿಕದಲ್ಲಿದ್ದ, ಮುಂಬೈನಲ್ಲಿ ಒಂಟಿಯಾಗಿ ವಾಸಿಸ್ತಾ ಇದ್ದ ಆಶಾ ಖಿನ್ನತೆಗೆ ಒಳಗಾಗಿದ್ರು. 2016ರ ಎಪ್ರಿಲ್ ನಲ್ಲಿ ಮಗ ರಿತುರಾಜ್ ಗೆ ಕರೆಮಾಡಿದ್ದ ಆಶಾ, ಮನೆಯಲ್ಲಿ ಒಂಟಿಯಾಗಿದ್ದು ಬೇಸರವಾಗಿದೆ, ತಾನು ಅನಾಥಾಶ್ರಮಕ್ಕೆ ಹೋಗ್ತೀನಿ ಅಂತಾ ಹೇಳಿದ್ರು.

ಅದಾದ್ಮೇಲೆ ರಿತುರಾಜ್ ತಾಯಿಯನ್ನು ಸಂಪರ್ಕಿಸಿರಲಿಲ್ಲ, ಫೋನ್ ಮೂಲಕ ಮಾತನಾಡಿರಲಿಲ್ಲ. ನಿನ್ನೆ ರಿತುರಾಜ್ ದಿಢೀರ್ ಅಂತ ಅಮೆರಿಕದಿಂದ ಮುಂಬೈಗೆ ಬಂದಿಳಿದಿದ್ದ. ಅಂಧೇರಿಯಲ್ಲಿದ್ದ ತಾಯಿಯ ಅಪಾರ್ಟ್ಮೆಂಟ್ ಗೆ ತೆರಳಿ ಬಾಗಿಲು ಬಡಿದಿದ್ದಾನೆ. ಆದ್ರೆ ಎಷ್ಟು ಕರೆದ್ರು ತಾಯಿ ಬಾಗಿಲು ತೆರೆಯಲಿಲ್ಲ.

ಕೊನೆಗೆ ಬಾಗಿಲಿಗೆ ರಂಧ್ರ ಮಾಡಿ, ಚಿಲಕ ತೆರೆದು ರಿತುರಾಜ್ ಒಳಪ್ರವೇಶಿಸಿದ್ದ. ಆತನ ತಾಯಿ ಆಶಾ ಮಲಗುವ ಕೋಣೆಯಲ್ಲಿ ಅಸ್ಥಿಪಂಜರವಾಗಿದ್ರು. ಆಕೆ ಮೃತಪಟ್ಟು ಹಲವು ವಾರಗಳೇ ಕಳೆದು ಹೋಗಿದ್ವು. ದೇಹ ಸಂಪೂರ್ಣ ಕೊಳೆತು ಕೇವಲ ಅಸ್ಥಿಪಂಜರ ಮಾತ್ರ ಉಳಿದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...