alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಿಂದ ಹೊರಟು ಅರ್ಧಗಂಟೆಯಲ್ಲೇ ಹೆಣವಾದ IAS ಅಧಿಕಾರಿ ಪುತ್ರ

dead

ಮುಂಬೈನ ಐಎಎಸ್ ಅಧಿಕಾರಿಯೊಬ್ಬರ ಪುತ್ರ ಶವವಾಗಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 18 ವರ್ಷದ ಮನ್ಮಥ್ ಮೈಸ್ಕರ್ ಮೃತ ಯುವಕ.

ನೆಪೀನ್ ಸೀ ರೋಡ್ ನಲ್ಲಿರುವ 21 ಅಂತಸ್ಥಿನ ದರಿಯಾ ಮಹಲ್ ಕಟ್ಟಡದ ಮುಂಭಾಗದಲ್ಲಿ ಮನ್ಮಥ್ ಶವ ದೊರೆತಿದೆ, ಆತನ ತಲೆ ಸೀಳಿ ಹೋಗಿತ್ತು. ಮನ್ಮಥ್ ತಂದೆ ಮಿಲಿಂದ್ ಮೈಸ್ಕರ್ ಹಾಗೂ ಮನೀಶ್ ಮೈಸ್ಕರ್ ಇಬ್ಬರೂ ಐಎಎಸ್ ಅಧಿಕಾರಿಗಳು.

ಬೆಳಗ್ಗೆ 7 ಗಂಟೆಗೆ ಮನೆಯಿಂದ ಹೊರಟಿದ್ದ ಮನ್ಮಥ್, ಸ್ನೇಹಿತನನ್ನು ಭೇಟಿಯಾಗಿ ಬರ್ತೀನಿ ಅಂತಾ ಹೇಳಿದ್ದ. ಆತ ಹೊರಟು ಅರ್ಧ ಗಂಟೆ ಕಳೆಯುವಷ್ಟರಲ್ಲಿ ಪೊಲೀಸರಿಗೆ ಸಾರ್ವಜನಿಕರಿಂದ ಕರೆ ಬಂದಿತ್ತು. ರಸ್ತೆ ಮಧ್ಯದಲ್ಲಿ ಯುವಕನೊಬ್ಬ ಬಿದ್ದಿದ್ದಾನೆ ಅಂತಾ ಮಾಹಿತಿ ನೀಡಿದ್ರು. ಈ ಸಂಬಂಧ ಮನ್ಮಥ್ ನ ಇಬ್ಬರು ಸ್ನೇಹಿತರನ್ನು ವಿಚಾರಣೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...