alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಆಸ್ಪತ್ರೆಯಲ್ಲೇ ಸಿಬ್ಬಂದಿಗಳ ಭರ್ಜರಿ ಡ್ಯಾನ್ಸ್

mumbai hospitalಕೆಲ ದಿನಗಳ ಹಿಂದಷ್ಟೇ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯೊಬ್ಬರ ಪುತ್ರನ ವಿವಾಹಕ್ಕಾಗಿ ಬುಲಂದ್ ಶಹರ್ ನ ಆಸ್ಪತ್ರೆಯನ್ನೇ ಮದುವೆ ಮಂಟಪವನ್ನಾಗಿದ ಸುದ್ದಿ ವರದಿಯಾಗಿತ್ತು. ಈಗ ಅಂತಹುದೇ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

ಮುಂಬೈನ ಚೆಂಬೂರ್ ನಲ್ಲಿರುವ ದಿವಾಲಿಬೆನ್ ಮೆಹ್ತಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಕಾರ್ಯಕ್ರಮವೊಂದಕ್ಕಾಗಿ ಆಸ್ಪತ್ರೆಯ ಮೊದಲ ಮಹಡಿಯ ಹೊರ ರೋಗಿಗಳ ವಿಭಾಗವನ್ನು ಆಲಂಕರಿಸಲಾಗಿದೆಯಲ್ಲದೇ ಚಿಕಿತ್ಸೆಗೆಂದು ಬಂದ ರೋಗಿಗಳನ್ನು ಗ್ರೌಂಡ್ ಫ್ಲೋರ್ ಗೆ ಕಳುಹಿಸಲಾಗಿದೆ.

ಆದರೆ ವೈದ್ಯರು, ನರ್ಸ್ ಗಳೂ ಸೇರಿದಂತೆ ಅಸ್ಪತ್ರೆಯ ಸಿಬ್ಬಂದಿ ತಮ್ಮ ಕುಟುಂಬದೊಂದಿಗೆ ಮೊದಲ ಮಹಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ರೋಗಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ಜೋರು ಧ್ವನಿಯಲ್ಲಿ ಧ್ವನಿವರ್ಧಕ ಹಾಕಿಕೊಂಡು ಬಾಲಿವುಡ್ ಹಾಗೂ ಮರಾಠಿ ಚಿತ್ರಗಳ ಹಾಡುಗಳಿಗೆ ಸಕತ್ ಡ್ಯಾನ್ಸ್ ಮಾಡಲಾಗಿದೆ. ಮಾರ್ಚ್ 2 ರಂದು ನಡೆದಿದ್ದ ಈ ಡ್ಯಾನ್ಸ್ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಇದೀಗ ಬಿಎಂಸಿ, ಘಟನೆ ಕುರಿತಂತೆ ತನಿಖೆ ನಡೆಸಲು ಆದೇಶ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...