alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲಾಪ್ ಆಯ್ತು ಕಳ್ಳರ ಖತರ್ನಾಕ್ ಪ್ಲಾನ್

mumbai hostageಬೆಳಗ್ಗೆ 5.30ರ ಸಮಯ, ಸುಮಾರು 20 ವರ್ಷದ ಯುವಕನೊಬ್ಬ ಸ್ನಾನದ ಕೋಣೆಯ ಕಿಟಕಿ ಮೂಲಕ ಮನೆಯೊಳಕ್ಕೆ ನುಗ್ಗಿದ್ದ. ಮನೆಯ ಮುಖ್ಯದ್ವಾರ ತೆರೆದು ಇನ್ನಿಬ್ಬರನ್ನು ಒಳಕ್ಕೆ ಕರೆದುಕೊಂಡಿದ್ದ.

ಮೂವರೂ ಸೇರಿ ಮನೆಯವರನ್ನು ಗೃಹಬಂಧನದಲ್ಲಿಟ್ಟು ಲೂಟಿ ಮಾಡಲು ಪ್ಲಾನ್ ಮಾಡಿದ್ರು. ಆದ್ರೆ ನೆರೆಹೊರೆಯವರ ಸಮಯಪ್ರಜ್ಞೆಯಿಂದಾಗಿ ದರೋಡೆಕೋರರ ಮಾಸ್ಟರ್ ಪ್ಲಾನ್ ಫ್ಲಾಪ್ ಆಗಿದೆ.

ಮುಂಬೈನ ಜುಹುನಲ್ಲಿರುವ ಉಮಗ್ ಸೊಸೈಟಿಯಲ್ಲಿ ನಡೆದ ಘಟನೆ ಇದು. ಸಂಜಯ್ ಯಾದವ್ ಎಂಬ ಕಳ್ಳ ಪೈಪ್ ಹತ್ತಿ ಡಬಲ್ ಬೆಡ್ ರೂಮ್ ಮನೆಯೊಳಕ್ಕೆ ನುಗ್ಗಿದ್ದ. ಬಳಿಕ ಪವನ್ ಹಾಗೂ ಅಭಿಷೇಕ್ ಯಾದವ್ ಜೊತೆಯಾದ್ರು. ಮೂವರು ಸೇರಿ ಮನೆಯಲ್ಲಿದ್ದ ದಂಪತಿಯನ್ನು ಕೋಣೆಯಲ್ಲಿ ಕಟ್ಟಿ ಹಾಕಿದ್ರು. ಕಳ್ಳರಿಂದ ಕಾಪಾಡುವಂತೆ ಅವರು ಕೂಗಿಕೊಂಡಿದ್ದಾರೆ.

ಕೂಡಲೇ ಧಾವಿಸಿ ಬಂದ ನೆರೆಹೊರೆಯವರು ಮನೆಯ ಮುಖ್ಯದ್ವಾರವನ್ನು ಲಾಕ್ ಮಾಡಿ ಪೊಲೀಸರನ್ನು ಕರೆಸಿದ್ರು. ಅಷ್ಟೊತ್ತಿಗಾಗ್ಲೇ 7 ಲಕ್ಷ ನಗದು ಮತ್ತು ಆಭರಣಗಳನ್ನೆಲ್ಲ ಒಟ್ಟುಗೂಡಿಸಿಕೊಂಡು ಕಳ್ಳರು ಬಾತ್ ರೂಮಿನಲ್ಲಿ ಅಡಗಿ ಕುಳಿತಿದ್ರು. ಇಡೀ ಕಟ್ಟಡವನ್ನು ಸುತ್ತುವರಿದ ಪೊಲೀಸರು ಕಳ್ಳರನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...