alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಉಪಾಧ್ಯಕ್ಷನ ಹತ್ಯೆ ಸತ್ಯ ಬಹಿರಂಗ

ಮುಂಬೈನಲ್ಲಿ ನಡೆದ ಹೆಚ್.ಡಿ.ಎಫ್.ಸಿ. ಉಪಾಧ್ಯಕ್ಷ ಸಿದ್ಧಾರ್ಥ್ ಸಿಂಘ್ವಿ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕೇವಲ 35 ಸಾವಿರ ರೂಪಾಯಿಗಾಗಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಕ್ಯಾಬ್ ಚಾಲಕ ಸರ್ಫರಾಜ್ ಎಂಬಾತನನ್ನು ಬಂಧಿಸಿದ್ದಾರೆ. ಆರಂಭದಲ್ಲಿ ಬ್ಯಾಂಕ್ ಸಿಬ್ಬಂದಿಯೊಬ್ಬನ ಕೈವಾಡ ಇದಕ್ಕಿದೆ ಎನ್ನಲಾಗಿತ್ತು. ಬ್ಯಾಂಕ್ ಸಿಬ್ಬಂದಿ ಹಣ ನೀಡಿ ಕ್ಯಾಬ್ ಚಾಲಕನಿಂದ ಹತ್ಯೆ ಮಾಡಿಸಿದ್ದಾನೆ ಎನ್ನಲಾಗಿತ್ತು. ಕೊಲೆಗೆ ಪ್ರಮೋಷನ್ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಆದ್ರೀಗ ಹೊಸ ವಿಷ್ಯ ಬಹಿರಂಗವಾಗಿದೆ.

ಸರ್ಫರಾಜ್ ತಲೆ ಮೇಲೆ 35 ಸಾವಿರ ರೂಪಾಯಿ ಸಾಲವಿತ್ತಂತೆ. ಸಾಲ ತೀರಿಸಲು ಕ್ಯಾಬ್ ಚಾಲಕ, ಸಿದ್ಧಾರ್ಥ್ ಸಿಂಘ್ವಿಯನ್ನು ಹೆದರಿಸಲು ಯತ್ನಿಸಿದ್ದ. ಆದ್ರೆ ಯಡವಟ್ಟಾಗಿ ಕೊಲೆ ನಡೆದಿದೆ. ಕಮಲಾ ಹಿಲ್ಸ್ ನಲ್ಲಿಯೇ ಸಿದ್ಧಾರ್ಥ್ ಕೊಲೆ ಮಾಡಿ ಶವವನ್ನು ಬೇರೆ ಕಡೆ ಎಸೆದು ಕಾರನ್ನು ಬೇರೆ ಕಡೆ ಪಾರ್ಕ್ ಮಾಡಿದ್ದ ಚಾಲಕ.

ಚಾಲಕ ಮಾಡಿದ ಒಂದು ತಪ್ಪು ಆತ ಸಿಕ್ಕಿ ಬೀಳಲು ಕಾರಣವಾಯ್ತು. ಸಿದ್ಧಾರ್ಥ್ ಮೊಬೈಲ್ ಸಿಮ್ ತೆಗೆದ ಸರ್ಫರಾಜ್ ಅದಕ್ಕೆ ತನ್ನ ಸಿಮ್ ಹಾಕಿ ಮಾತನಾಡಿದ್ದ. ನ್ಯಾಯಾಲಯದ ಮುಂದೆ ಸಿದ್ಧಾರ್ಥ್ ತಪ್ಪೊಪ್ಪಿಕೊಂಡಿದ್ದಾನೆ. ಆದ್ರೆ ಬ್ಯಾಂಕ್ ಸಿಬ್ಬಂದಿ ರಕ್ಷಣೆಗೆ ಪೊಲೀಸರು ಸುಳ್ಳು ಹೇಳಿದ್ದಾರೆಂದು ಸಿದ್ಧಾರ್ಥ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...