alex Certify
ಕನ್ನಡ ದುನಿಯಾ       Mobile App
       

Kannada Duniya

ಸಹಾಯಕ್ಕೆ ಹೋದ NRI ಸಹೋದರರು ಬದುಕಿ ಬರಲಿಲ್ಲ

ಅವರಿಬ್ಬರೂ ಎನ್ನಾರೈ ಸಹೋದರರು ತಮ್ಮ ಕುಟುಂಬಸ್ಥರು ಹಾಗೂ ಗೆಳೆಯರ ಜೊತೆ ರಜೆಗಾಗಿ ಭಾರತಕ್ಕೆ ಬಂದಿದ್ದರು. ಮುಂಬೈನಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭಾರಿ ಅಗ್ನಿ ದುರಂತದ ವೇಳೆ ಚಿಕ್ಕಮ್ಮ-ಚಿಕ್ಕಪ್ಪನ ಜೊತೆ ಸಹೋದರರಿಬ್ಬರು ಮೇನ್ ಗೇಟ್ ವರೆಗೆ ಸುರಕ್ಷಿತವಾಗಿ ಬಂದಿದ್ದರು. ಆದ್ರೆ ಸಹಾಯದ ನೆಪದಲ್ಲಿ ಇಬ್ಬರು ಸಹೋದರರನ್ನು ಅಗ್ನಿ ಬಲಿ ಪಡೆದಿದೆ.

ಮುಖ್ಯ ಗೇಟ್ ವರೆಗೆ ಬಂದಿದ್ದ ಸಹೋದರರು ಇತರರಿಗೆ ಸಹಾಯ ಮಾಡಲು ಮತ್ತೆ ಕಟ್ಟಡದೊಳಗೆ ಹೋಗಿದ್ದಾರೆ. ಅನೇಕರ ಜೀವ ಉಳಿಸುವ ಕೆಲಸ ಕೂಡ ಮಾಡಿದ್ದಾರೆ. ಆದ್ರೆ ಒಳ ಹೋದವರು ವಾಪಸ್ ಬರಲಿಲ್ಲ. ಉಸಿರುಗಟ್ಟಿ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಕಮಲಾ ಮಿಲ್ ಪರಿಸರದ ತಾರಸಿ ಮೇಲಿದ್ದ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 14 ಮಂದಿ ಬಲಿಯಾಗಿದ್ದಾರೆ. ಅಮೆರಿಕಾದಲ್ಲಿ ಚಿಕ್ಕಮ್ಮನ ಜೊತೆ ವಾಸವಾಗಿದ್ದ 26 ವರ್ಷದ ಧೈರ್ಯ ಹಾಗೂ 22 ವರ್ಷದ ವಿಶಾಲ್ ಮುಂಬೈನಲ್ಲಿರುವ ಕುಟುಂಬಸ್ಥರ ಜೊತೆ ಊಟಕ್ಕಾಗಿ ಈ ರೆಸ್ಟೋರೆಂಟ್ ಗೆ ಬಂದಿದ್ದರು. ಬೆಂಕಿ ಹತ್ತಿಕೊಳ್ತಿದ್ದಂತೆ ವಿಶಾಲ್ ಹಾಗೂ ಧೈರ್ಯ, ಚಿಕ್ಕಮ್ಮ-ಚಿಕ್ಕಪ್ಪನ ಜೊತೆ ಹೊರಗೆ ಬಂದಿದ್ದಾರೆ. ಆದ್ರೆ ಉಳಿದ ಸಂಬಂಧಿಕರನ್ನು ರಕ್ಷಿಸಲು ಮತ್ತೆ ರೆಸ್ಟೋರೆಂಟ್ ಗೆ ಹೋಗಿದ್ದಾರೆ. ಅನೇಕರ ಜೀವ ಉಳಿಸಿದ ಸಹೋದರರು ಮಾತ್ರ ಬದುಕಿ ಬರಲಿಲ್ಲ. ಮುಂಬೈನಲ್ಲಿ ಅಡುಗೆ ವ್ಯವಹಾರ ನಡೆಸುವ ಪಾಲಕರು ಇಬ್ಬರು ಮಕ್ಕಳನ್ನು ಒಟ್ಟಿಗೆ ಕಳೆದುಕೊಂಡು ಕಂಗಾಲಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...