alex Certify
ಕನ್ನಡ ದುನಿಯಾ       Mobile App
       

Kannada Duniya

ಒಟ್ಟೊಟ್ಟಿಗೇ ಪರೀಕ್ಷೆ ಬರೆಯುತ್ತಿದ್ದಾರೆ ಈ ತಂದೆ-ಮಗಳು

ಮುಂಬೈನ ಹರ್ಷಾಲಿ ಮತ್ತವಳ ತಂದೆ ಇಬ್ಬರಿಗೂ ಈ ಬಾರಿ ಬೋರ್ಡ್ ಎಕ್ಸಾಮ್. ಹರ್ಷಾಲಿ ಎಸ್ ಎಸ್ ಸಿ ಪರೀಕ್ಷೆ ಬರೆಯುತ್ತಿದ್ದಾಳೆ. ಅವಳ ತಂದೆ ಹೈಯರ್ ಸೆಕೆಂಡರಿ ಸರ್ಟಿಫಿಕೇಟ್ ಗಾಗಿ ಬೋರ್ಡ್ ಎಕ್ಸಾಮ್ ಗೆ ಹಾಜರಾಗಿದ್ದಾರೆ.

ಸುನಿಲ್ ತಾಂಬೆ ಬಿಎಂಸಿಯ ಜಲಮಂಡಳಿಯಲ್ಲಿ ಕೆಲಸ ಮಾಡ್ತಾರೆ. 2015ರಲ್ಲಿ ಸುನಿಲ್ ಶೇ.63.80 ಅಂಕಗಳೊಂದಿಗೆ SSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರಂತೆ. ಈ ಬಾರಿ ಕೂಡ ಕೆಲಸಕ್ಕೆ ರಜಾ ಹಾಕಿ ಚೆನ್ನಾಗಿ ಓದಿ, ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ವಿಶೇಷ ಅಂದ್ರೆ ಸುನಿಲ್ ಪತ್ನಿ ಸ್ಮಿತಾ ಕೂಡ 2015ರಲ್ಲಿ SSC ಪರೀಕ್ಷೆಯನ್ನು ದ್ವಿತೀಯ ದರ್ಜೆಯಲ್ಲಿ ಪಾಸ್ ಮಾಡಿದ್ರು. ಸುನಿಲ್ ಮಿಲಿಂದ್ ನೈಟ್ ಸ್ಕೂಲ್ ಸೇರುವ ಮೂಲಕ ಓದನ್ನು ಮುಂದುವರಿಸಿದ್ದಾರೆ. ಕೆಲಸದ ಜೊತೆ ಜೊತೆಗೆ ಸ್ಕೂಲಿಗೂ ಹೋಗ್ತಿದ್ದಾರೆ ಇವರು.

ತಂದೆಯ ಸಾಧನೆ ನೋಡಿ ಹರ್ಷಾಲಿಗೂ ಹೆಮ್ಮೆ. ಅಪ್ಪ ಚೆನ್ನಾಗಿ ಓದಿ ಪದವಿ ಪೂರ್ಣಗಳಿಸಬೇಕು ಅಂತಾ ಆಸೆಪಡ್ತಿದ್ದಾಳೆ. ಮಗಳ ಕನಸನ್ನು ನನಸು ಮಾಡಲು ಸುನಿಲ್ ಕೂಡ ಪ್ರಯತ್ನಪಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...