alex Certify
ಕನ್ನಡ ದುನಿಯಾ       Mobile App
       

Kannada Duniya

ನಾನ್ ವೆಜ್ ತಿಂತೀರಾ? ಹಾಗಿದ್ರೆ ಮಿಸ್ ಮಾಡ್ಡೇ ಓದಿ

ನೀವು ಮಾಂಸಾಹಾರಿಯಾಗಿದ್ದರೆ ತಪ್ಪದೇ ಈ ಸುದ್ದಿ ಓದಲೇಬೇಕು. ಚಿಕನ್ ತಿಂದವನೊಬ್ಬ ಪ್ರಾಣಾಪಾಯಕ್ಕೆ ಒಳಗಾಗಿದ್ದು, ವೈದ್ಯರು ಸಕಾಲಕ್ಕೆ ಮಾಡಿದ ಶಸ್ತ್ರ ಚಿಕಿತ್ಸೆಯಿಂದಾಗಿ ಜೀವ ಉಳಿಸಿಕೊಂಡಿದ್ದಾನೆ.

ಮೇ 3 ರಂದು ಉತ್ತರಪ್ರದೇಶದ ಗ್ರಾಮವೊಂದಕ್ಕೆ ಸಂಬಂಧಿಕರ ವಿವಾಹಕ್ಕೆಂದು ತೆರಳಿದ್ದ ಸಗೀರ್ ಶಾ ಎಂಬ ಮುಂಬೈ ಮೂಲದ 36 ವರ್ಷದ ವ್ಯಕ್ತಿ  ಮದುವೆ ಔತಣಕೂಟದಲ್ಲಿ ಚಿಕನ್ ಊಟ ಮಾಡಿದ್ದ.

ಊಟ ಮಾಡಿದ ಸ್ವಲ್ಪಹೊತ್ತಿನಲ್ಲೇ ಆತನಿಗೆ ಗಂಟಲಲ್ಲಿ ನೋವು ಕಾಣಿಸಿಕೊಂಡಿದ್ದು, ಸ್ಥಳೀಯ ವೈದ್ಯರಲ್ಲಿ ತೋರಿಸಿಕೊಂಡಿದ್ದ. ಪರಿಶೀಲಿಸಿದ್ದ ವೈದ್ಯರು, ಯಾವುದೇ ತೊಂದರೆ ಇಲ್ಲ. ಸ್ವಲ್ಪ ಹೊತ್ತಿನಲ್ಲಿ ಸರಿಯಾಗುತ್ತದೆ ಎಂದು ಹೇಳಿ ಕೆಲ ಮಾತ್ರೆಗಳನ್ನು ನೀಡಿದ್ದರು

ಇದಾದ ಬಳಿಕ ಸಗೀರ್ ಶಾ ಮುಂಬೈಗೆ ಮರಳಿದ್ದು, ಆತನ ತೊಂದರೆ ಮುಂದುವರೆದೇ ಇತ್ತು. ಹೀಗಾಗಿ ಆತ ಕುರ್ಲಾದಲ್ಲಿರುವ ಫೌಜಿಯಾ ಆಸ್ಪತ್ರೆಗೆ ತೆರಳಿದ್ದು, ಸಿಟಿ ಸ್ಕ್ಯಾನ್ ಮಾಡಿದ ಅಲ್ಲಿನ ವೈದ್ಯರಿಗೆ ಸಗೀರ್ ಶಾನ ಅನ್ನನಾಳದಲ್ಲಿ ವಸ್ತುವೊಂದು ಕಂಡು ಬಂದಿತ್ತು.

ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಮುಂದಾಗಿದ್ದು, ಶಸ್ತ್ರಚಿಕಿತ್ಸೆ ವೇಳೆ ಆತನ ಅನ್ನನಾಳದಲ್ಲಿ ಮೂರುವರೆ ಸೆಂಟಿಮೀಟರ್ ಉದ್ದದ ಮೂಳೆ ಸಿಕ್ಕಿಹಾಕಿಕೊಂಡಿರುವುದು ಕಂಡುಬಂದಿದೆ. ಅದನ್ನು ಈಗ ವೈದ್ಯರು ತೆಗೆದುಹಾಕಿದ್ದು, ಔತಣಕೂಟದಲ್ಲಿ ಚಿಕನ್ ತಿನ್ನುವ ವೇಳೆ ಈ ಮೂಳೆ ಸಿಕ್ಕಿಹಾಕಿಕೊಂಡಿರಬೇಕೆಂದು ಹೇಳಲಾಗಿದೆ.

ಇನ್ನು ಕೆಲ ದಿನ ಹಾಗೆಯೇ ಬಿಟ್ಟಿದ್ದರೆ ಸಗೀರ್ ಶಾ ಜೀವಕ್ಕೇ ಅಪಾಯವಾಗುತ್ತಿತ್ತು ಎಂದು ಹೇಳಲಾಗಿದ್ದು, ಸಕಾಲಕ್ಕೆ ಪಡೆದುಕೊಂಡ ಚಿಕಿತ್ಸೆಯಿಂದಾಗಿ ಆತ ಪಾರಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...