alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ: ಹಾವಿಗೆ ಮಾಡಲಾಗಿದೆ ಎಂ.ಆರ್.ಐ. ಸ್ಕ್ಯಾನ್

ಈ ಡಾಕ್ಟರ್ ವಿಶಿಷ್ಟ ರೋಗಿಗೆ ಚಿಕಿತ್ಸೆ ನೀಡಿದ್ದಾರೆ, ಎಂಆರ್‌ಐ ಸ್ಕ್ಯಾನಿಂಗ್ ಮಾಡಿ ಮುರಿದ ಬೆನ್ನುಹುರಿಯನ್ನು ಮರಳಿ ಜೋಡಿಸಿದ್ದಾರೆ. ಆ ರೋಗಿ ಯಾರು ಗೊತ್ತಾ? ಹಾವು.. !

ಇತ್ತೀಚೆಗೆ ಮುಂಬೈನ ಮನೆಯೊಂದರಲ್ಲಿ ಬೆನ್ನುಮುರಿದ ಹಾವೊಂದು ಕಂಡುಬಂತು. ಅದು ವಿಷಸರ್ಪವಾಗಿರುವ ಮಂಡಲ ಹಾವಾಗಿತ್ತು. ಕೋಲಿನಿಂದ ಬಡಿದ ಕಾರಣ ಹಸಿರು ಹಾವಿನ ಬೆನ್ನು ಮುರಿದಿತ್ತು.

ಆರಂಭದಲ್ಲಿ ಇದರ ಬೆನ್ನುಹುರಿಯ ಎಕ್ಸ್ ರೇ ಮಾಡಲಾಯಿತು. ಆದರೆ ಪ್ರಯೋಜನವಾಗಲಿಲ್ಲ. ಹಾಗಾಗಿ ಎಂಆರ್‌ಐ ಮಾಡಿಸಲು ನಾವು ಆಲೋಚಿಸಿದೆವು ಎಂದು ಪಶುವೈದ್ಯ ಡಾ.ದೀಪಾ ಕತ್ಯಾಲ್ ಹೇಳುತ್ತಾರೆ.

ಸ್ಥಳೀಯ ಹಾವು ರಕ್ಷಕ ವೈಭವ್ ಪಾಟೀಲ್ ಈ ಹಾವನ್ನು ಹಿಡಿದು ತಂದು ಸರ್ಕಾರಿ ಪರವಾನಗಿ ಹೊಂದಿರುವ ಹಾವು ರಕ್ಷಕ ಅನಿಲ್ ಕುಬಾಲ್ ಅವರಿಗೆ ನೀಡಿದ್ದರು. ಅನಿಲ್ ವೈದ್ಯರನ್ನು ಸಂಪರ್ಕಿಸಿದ್ದರು.

ರೇಡಿಯಾಲಜಿಸ್ಟ್ ಡಾ.ರವಿ ಥಾಪರ್ ಸ್ಕ್ಯಾನ್ ನಡೆಸಿ ಬೆನ್ನುಹುರಿ ಸಹಿತ ದೇಹದ ಕ್ರಾಸ್ ಸೆಕ್ಷನ್ ಹಾನಿಯಾಗಿರುವುದನ್ನು ದೃಢಪಡಿಸಿದರು. ಬೆನ್ನುಹುರಿಗೆ ಗಾಯವಾಗಿರುವುದಲ್ಲದೆ ಊತವೂ ಆಗಿತ್ತು. ಸಾಮಾನ್ಯವಾಗಿ ಮಾನವರಿಗೆ ಮಾತ್ರ ನಡೆಸುವ ಎಂಆರ್‌ಐ ಅನ್ನು ಮೊದಲ ಬಾರಿಗೆ ಹಾವಿಗೆ ನಡೆಸಿದ್ದರು. ರೇಡಿಯಾಲಜಿಸ್ಟ್ ಅವರ ಶಿಫಾರಸ್ಸಿನ ಮೇರೆಗೆ ಡಾ.ದೀಪಾ ಹಾವಿಗೆ ಚಿಕಿತ್ಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...