alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಮನಾಥ ದೇವಾಲಯಕ್ಕೆ 40 ಕೆ.ಜಿ. ಚಿನ್ನವನ್ನರ್ಪಿಸಿದ ವಜ್ರ ವ್ಯಾಪಾರಿ

temple goldಮುಂಬೈನ ವಜ್ರ ವ್ಯಾಪಾರಿಯೊಬ್ಬರು ಗುಜರಾತಿನ ಸೋಮನಾಥ ದೇವಾಲಯಕ್ಕೆ 12 ಕೋಟಿ ರೂ. ಮೌಲ್ಯದ 40 ಕೆ.ಜಿ. ಚಿನ್ನವನ್ನು ಅರ್ಪಿಸಿದ್ದಾರೆ. ಈ ಹಿಂದೆಯೂ ಅವರನ್ನು ಚಿನ್ನವನ್ನು ನೀಡಿದ್ದು, ಈವರೆಗೆ ಒಟ್ಟು 109 ಕೆ.ಜಿ. ಚಿನ್ನ ನೀಡಿದಂತಾಗಿದೆ.

ಹಲವು ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ವಜ್ರ ವ್ಯಾಪಾರಿ ದಿಲೀಪ್ ಲಖಿ ನೀಡಿರುವ ಈ ಚಿನ್ನವನ್ನು ದೇವಾಲಯದ ಹೊರ ಆವರಣದಲ್ಲಿ ಅಳವಡಿಸಲಾಗಿದ್ದು, ಶಿವಮಂದಿರ ಮತ್ತಷ್ಟು ಆಕರ್ಷಕವಾಗಿ ಕಾಣುತ್ತಿದೆ.

ದಿಲೀಪ್ ಲಖಿ, ಈ ಹಿಂದೆ ಬ್ರೀಚ್ ಕ್ಯಾಂಡಿ ಬಳಿ ಇರುವ ‘ಕ್ಯಾಡ್ ಬರಿ ಹೌಸ್’ ಅನ್ನು 350 ಕೋಟಿ ರೂ. ಗಳಿಗೆ ಖರೀದಿಸಿದ್ದ ವೇಳೆ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ದಿಲೀಪ್ ಲಖಿ, ಇದಕ್ಕಾಗಿ ಟ್ರಸ್ಟ್ ಒಂದನ್ನು ರಚಿಸಿಕೊಂಡಿದ್ದು, ಆ ಮೂಲಕ ನೂರಾರು ಕೋಟಿ ರೂ. ಗಳನ್ನು ಅಶಕ್ತರ ಕಲ್ಯಾಣಕ್ಕೆ ವಿನಿಯೋಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...