alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಗೆ ಬಲವಂತ ಮಾಡಿ ಪ್ಯಾಂಟ್ ಗೆ ಬೆಂಕಿ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಬಾಲಕನ ಪ್ಯಾಂಟ್ ಗೆ ಬೆಂಕಿ ಹಚ್ಚಲಾಗಿದೆ.

ಮುಂಬೈನ ಗೋರೆಗಾಂವ್ ಫಿಲ್ಮ್ ಸಿಟಿ ಸಮೀಪದಲ್ಲಿ 13 ವರ್ಷದ ಬಾಲಕನಿಗೆ ಬೆಂಕಿ ಹಚ್ಚಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಬಾಲಕ ಕಳೆದ ತಿಂಗಳು ತನ್ನ ಇಬ್ಬರು ಸ್ನೇಹಿತರೊಂದಿಗೆ ಫಿಲ್ಮ್ ಸಿಟಿ ರಸ್ತೆಯಲ್ಲಿ ಹೋಗುವಾಗ, ಅಲ್ಲೇ ಡ್ರಗ್ಸ್ ಸೇವನೆ ಮಾಡುತ್ತಿದ್ದ ಯುವಕರು ಹತ್ತಿರಕ್ಕೆ ಬರುವಂತೆ ಕರೆದಿದ್ದಾರೆ.

ಬಾಲಕ ಮತ್ತು ಆತನ ಸ್ನೇಹಿತರು ಬರಲು ನಿರಾಕರಿಸಿ ಮುಂದೆ ಸಾಗಿದ್ದಾರೆ. ಅಮಲಿನಲ್ಲಿದ್ದ ಯುವಕರು ಬಾಲಕನನ್ನು ಎಳೆದುಕೊಂಡು ಬಂದು ಪ್ಯಾಂಟ್ ತೆಗೆಯುವಂತೆ ಬಲವಂತ ಮಾಡಿದ್ದಾರೆ. ಆತನೊಂದಿಗೆ ಸೆಕ್ಸ್ ಗೆ ಮುಂದಾಗಿದ್ದು, ಬಾಲಕ ತಪ್ಪಿಸಿಕೊಳ್ಳಲು ಮುಂದಾಗುತ್ತಿದ್ದಂತೆ ಪ್ಯಾಂಟ್ ಗೆ ಬೆಂಕಿ ಹಚ್ಚಿದ್ದಾರೆ.

ಬಾಲಕ ಕಿರುಚಾಡುತ್ತಾ ಅಲ್ಲಿಂದ ಓಡಿದ್ದು, ಅದೇ ಮಾರ್ಗವಾಗಿ ಹೋಗುತ್ತಿದ್ದ ಆರ್ಟ್ ಡೈರೆಕ್ಟರ್ ಯೋಗರಾಜ್ ಶೆಟ್ಟಿ ಬಾಲಕನನ್ನು ರಕ್ಷಿಸಿದ್ದಾರೆ. ಸ್ಥಳೀಯರು ಕೂಡ ಅವರಿಗೆ ನೆರವಾಗಿದ್ದಾರೆ. ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಘಟನೆ ನಡೆದು 9 ದಿನಗಳಾದ ಬಳಿಕ ದೂರು ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸದೇ, ರಾಜಿ ಮಾಡಿಕೊಳ್ಳುವಂತೆ ಬಾಲಕನ ಕುಟುಂಬದವರಿಗೆ ಸೂಚಿಸಿದ್ದಾರೆ.

ಪೊಲೀಸರು ಸ್ಪಂದಿಸದ ಕಾರಣ ಬಾಲಕನ ಕುಟುಂಬದವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಲು ಮುಂದಾಗಿದ್ದು, ನಂತರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...