alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ಆರೋಪಿ ಬಿಡುಗಡೆಯಾಗಿದ್ದೇಕೆ ಗೊತ್ತಾ..?

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದಾತನನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ. ಆದರೆ ಇದಕ್ಕೆ ಕಾರಣವಾಗಿದ್ದು, ಆತನ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಯುವತಿ ಎಂಬುದು ಗಮನಾರ್ಹ. ಇಂತದೊಂದು ಪ್ರಕರಣ ಮುಂಬೈನಲ್ಲಿ ನಡೆದಿದೆ.

2016 ರಲ್ಲಿ ಮುಂಬೈನ ಶಿವಾಜಿ ನಗರ್ ಪೊಲೀಸ್ ಠಾಣೆಯಲ್ಲಿ ಮಹಮ್ಮದ್ ಫೈಜಾನ್ ಖಾನ್ ಎಂಬಾತನ ವಿರುದ್ದ ಆತನ ಗೆಳತಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಮದುವೆಯಾಗುವುದಾಗಿ ತನ್ನನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ ಮಹಮ್ಮದ್ ಫೈಜಾನ್ ಖಾನ್ ಈಗ ವಂಚಿಸಿದ್ದಾನೆಂದು ಆರೋಪಿಸಿದ್ದಳು.

ಇತ್ತೀಚೆಗೆ ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಆರಂಭಗೊಂಡಿದ್ದು, ದೂರು ಕೊಟ್ಟ ಯುವತಿಯನ್ನು ಹೇಳಿಕೆ ದಾಖಲಿಸಲು ಕರೆಸಲಾಗಿತ್ತು. ಆದರೆ ಆಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದು, ಬಳಿಕ ತಿಳಿದುಬಂದ ಸಂಗತಿಯೆಂದರೇ ಯುವತಿ ತಾನು ದೂರು ಕೊಟ್ಟಾತನೊಂದಿಗೆ ವಿವಾಹವಾಗಿದ್ದಳಲ್ಲದೇ ಈಗಾಗಲೇ ದಂಪತಿಗೆ ಒಂದು ಮಗುವಿರುವುದು ಗೊತ್ತಾಗಿದೆ. ಬಳಿಕ ತನ್ನ ಹೇಳಿಕೆ ದಾಖಲಿಸಿದ ಯುವತಿ, ತಪ್ಪು ಗ್ರಹಿಕೆಯಿಂದ ತಾನು ಅತ್ಯಾಚಾರದ ಪ್ರಕರಣ ದಾಖಲಿಸಿದ್ದು, ಇದೀಗ ಪತಿಯೊಂದಿಗೆ ಸಂತಸದಿಂದಿರುವುದಾಗಿ ತಿಳಿಸಿದ್ದಾಳೆ. ಈ ಹಿನ್ನಲೆಯಲ್ಲಿ ನ್ಯಾಯಾಲಯ ಮಹಮ್ಮದ್ ಫೈಜಾನ್ ಖಾನ್ ವಿರುದ್ದದ ಪ್ರಕರಣವನ್ನು ವಜಾಗೊಳಿಸಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...