alex Certify
ಕನ್ನಡ ದುನಿಯಾ       Mobile App
       

Kannada Duniya

ತೆರಿಗೆ ಬಾಕಿ ಉಳಿಸಿಕೊಂಡಿದ್ದ ಕ್ಲಬ್ ಗೆ ನೀರು ಬಂದ್

ಮುಂಬೈನ ನಾಗರಿಕಾ ಸೇವಾ ಸಂಸ್ಥೆ, ಕ್ಲಬ್ ಗೆ ನೀರು ಸರಬರಾಜನ್ನು ತಡೆ ಹಿಡಿಯಲಾಗಿದೆ. ಈ ಕ್ಲಬ್ ನ ಸದಸ್ಯರು ಸೇನಾಧಿಕಾರಿಗಳು. ಈ ಕ್ಲಬ್ 221 ಕೋಟಿ ರೂ. ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

1937 ರಲ್ಲಿ ಯುನೈಟೆಡ್ ಸರ್ವಿಸ್ ಕ್ಲಬ್ ಸ್ಥಾಪನೆ ಆಗಿದ್ದು, ಭೂ ಸೇನೆ, ನೌಕಾ ಸೇನೆ ಹಾಗೂ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಧಿಕಾರಿಗಳಿಗೆ ಮಾತ್ರ ಕ್ಲಬ್ ಸದಸ್ಯತ್ವ ನೀಡಲಾಗುತ್ತದೆ.

ಮುಂಬೈ ಪಾಲಿಕೆಯ ಅಧಿಕಾರಿ ಈ ವಿಷಯವನ್ನು ಧೃಡೀಕರಿಸಿದ್ದಾರೆ. 81 ವರ್ಷ ಹಳೆಯ ಕ್ಲಬ್ ತೆರಿಗೆ ಹಣವನ್ನು ಕಟ್ಟದೇ ಇರೋದ್ರಿಂದ ನೀರಿನ ಸರಬರಾಜನ್ನು ತಡೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಪಾಲಿಕೆಗೆ ಆಸ್ತಿ ಮೌಲ್ಯಮಾಪನ ಇಲಾಖೆ ಮಾಹಿತಿ ನೀಡಿದ್ದು, ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...