alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ಬಳಿ ದುರಂತಕ್ಕೀಡಾಗಿದೆ ನಾಪತ್ತೆಯಾಗಿದ್ದ ಹೆಲಿಕಾಪ್ಟರ್

ಮುಂಬೈನಲ್ಲಿ ಕಾಣೆಯಾಗಿದ್ದ ಪವನ್ ಹಂಸ್ ಹೆಲಿಕಾಪ್ಟರ್ ನ ಅವಶೇಷಗಳು ಪತ್ತೆಯಾಗಿವೆ. ಹೆಲಿಕಾಪ್ಟರ್ ಪತನಗೊಂಡಿದ್ದು, ಮೂವರ ಮೃತದೇಹಗಳು ಕೂಡ ಸಿಕ್ಕಿವೆ. ಜುಹು ವಿಮಾನ ನಿಲ್ದಾಣದಿಂದ ಹೊರಟಿದ್ದ ಈ ಕಾಪ್ಟರ್ ನಲ್ಲಿ ಐವರು ONGC ಉದ್ಯೋಗಿಗಳು ಸೇರಿದಂತೆ 7 ಜನರಿದ್ದರು.

ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೆಲಿಕಾಪ್ಟರ್ ನಲ್ಲಿದ್ದ ಇತರ ನಾಲ್ವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಮುಂಬೈನಿಂದ 30 ನಾಟಿಕಲ್ ಮೈಲು ದೂರದಲ್ಲಿದ್ದ ಕಾಪ್ಟರ್, ಸಂಪರ್ಕ ಕಳೆದುಕೊಂಡಿತ್ತು.

ಬೆಳಗ್ಗೆ 10.20ಕ್ಕೆ ಜುಹುವಿನಿಂದ ಹೊರಟ ವಿಮಾನ 10.58ಕ್ಕೆ ONGC ನಾರ್ತ್ ಫೀಲ್ಡ್ ತಲುಪಬೇಕಿತ್ತು. ಆದ್ರೆ ಅಲ್ಲಿಗೆ ತಲುಪುವ ಮೊದಲೇ ದುರಂತ ನಡೆದು ಹೋಗಿದೆ. ಹೆಲಿಕಾಪ್ಟರ್ ಹೊರಟು ಕೇವಲ 2 ನಿಮಿಷಗಳ ನಂತರ ಸಂಪರ್ಕ ಕಡಿತಗೊಂಡಿತ್ತು ಅಂತಾನೂ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...