alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುವಂತಿದೆ ಕೋರ್ಟ್ ನಲ್ಲಿ ನಡೆದ ಘಟನೆ

bombay-hi

ಮುಂಬೈ: ಗಂಡ, ಹೆಂಡಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿದೆ. ಬಾಂಬೆ ಹೈಕೋರ್ಟ್ ನಲ್ಲಿ ನಡೆದ ಘಟನೆ ಈ ಮಾತನ್ನು ನೆನಪಿಸುವಂತಿದೆ.

6 ವರ್ಷದ ಪುಟಾಣಿ ಅಮ್ಮನೊಂದಿಗೆ ಹೋಗಲಾರೆ, ಅಪ್ಪನೊಂದಿಗೆ ಕಳಿಸಿ ಎಂದು ಕಣ್ಣೀರಿಟ್ಟ ಭಾವುಕ ಕ್ಷಣಕ್ಕೆ ನ್ಯಾಯಾಲಯ ಸಾಕ್ಷಿಯಾಗಿದೆ.

28 ವರ್ಷದ ಮಹಿಳೆ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದು, ಗಂಡು ಮಗುವಿನೊಂದಿಗೆ ಬೇರೆ ವಾಸವಾಗಿದ್ದಾಳೆ. ಮಗುವನ್ನು ತನ್ನ ಮಾಜಿ ಪತಿ ಅಪಹರಿಸಿದ್ದು, ಕೋರ್ಟ್ ಗೆ ಹಾಜರುಪಡಿಸುವಂತೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾಳೆ.

2006 ರಲ್ಲಿ ಮದುವೆಯಾಗಿದ್ದ ದಂಪತಿಗೆ 2010 ರಲ್ಲಿ ಮಗುವಾಗಿದ್ದು, 2014 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಕೌಟುಂಬಿಕ ನ್ಯಾಯಾಲಯ ಮಗುವನ್ನು ತಾಯಿಯ ಸುಪರ್ದಿಗೆ ನೀಡಿತ್ತು. 2016 ರ ಆಗಸ್ಟ್ ನಲ್ಲಿ ಮಗುವನ್ನು ಅಪಹರಿಸಲಾಗಿದೆ ಎಂದು ಮಾಜಿ ಪತಿಯ ವಿರುದ್ಧ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿ, ಕೋರ್ಟ್ ಮೊರೆ ಹೋಗಿದ್ದಾಳೆ.

ಮಗುವಿನೊಂದಿಗೆ ಕೋರ್ಟ್ ಗೆ ಹಾಜರಾದ ತಂದೆಗೆ ಕೋರ್ಟ್ ಛೀಮಾರಿ ಹಾಕಿದೆ. ಆದರೆ, ಮಗು ಅಮ್ಮನೊಂದಿಗೆ ಹೋಗಲು ಇಷ್ಟ ಪಡದೇ ಬಿಕ್ಕಿ ಬಿಕ್ಕಿ ಅತ್ತಿದೆ. ತಂದೆಯ ಜೊತೆ ಕಳಿಸಿಕೊಡುವಂತೆ ಜೋರಾಗಿ ಅತ್ತಿದೆ. ಕೊನೆಗೆ ಅಳುತ್ತಿದ್ದ ಮಗುವನ್ನು ತಾಯಿ ಕರೆದುಕೊಂಡು ಹೋಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪರಾಭವಕ್ಕೆ ಕೊಹ್ಲಿ ತಪ್ಪು ನಿರ್ಧಾರ ಕಾರಣವೇ..?

    View Results

    Loading ... Loading ...