alex Certify
ಕನ್ನಡ ದುನಿಯಾ       Mobile App
       

Kannada Duniya

ಸುಳ್ಳು ಹೇಳಿದ್ರಾ ಹಾಲುಣಿಸುತ್ತಿದ್ದ ಮಹಿಳೆ

ಮುಂಬೈ: ಹಾಲುಣಿಸುತ್ತಿದ್ದ ಮಹಿಳೆ ಸಮೇತ ಕಾರನ್ನು ಸಂಚಾರ ಪೊಲೀಸರು ಎಳೆದುಕೊಂಡು ಹೋಗಿದ್ದು ದೇಶಾದ್ಯಂತ ಭಾರೀ ಸುದ್ದಿಯಾಗಿದ್ದು, ಈ ಪ್ರಕರಣ ಮತ್ತೊಂದು ತಿರುವು ಪಡೆದಿದೆ.

ಮುಂಬೈನ ಮಲಾಡ್ ಪ್ರದೇಶದಲ್ಲಿ ಜ್ಯೋತಿ ಮಾಲ್ ಹೆಸರಿನ ಮಹಿಳೆ ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರಿನಲ್ಲಿ ಮಗುವಿಗೆ ಹಾಲುಣಿಸುವಾಗ ಸಂಚಾರ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಹಾಲುಣಿಸುತ್ತಿದ್ದ ಮಹಿಳೆ ಸಮೇತ ಕಾರು ಎಳೆದುಕೊಂಡು ಹೋಗಿದ್ದಾರೆ ಎನ್ನಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರನ್ನು ಅಮಾನತು ಮಾಡಲಾಗಿತ್ತು.

ಆದರೆ, ಪೊಲೀಸರು ಎಚ್ಚರಿಕೆ ನೀಡುವ ಸಂದರ್ಭದಲ್ಲಿ ಮಹಿಳೆಯೊಂದಿಗೆ ಮಗು ಇರಲಿಲ್ಲ. ನಂತರದಲ್ಲಿ ಬೇರೆಯವರೊಬ್ಬರು ಮಗುವನ್ನು ಮಹಿಳೆ ಕೈಗೆ ಕೊಟ್ಟಿದ್ದಾರೆ. ಈಗ ಹರಿದಾಡುತ್ತಿರುವ ಹೊಸ ವಿಡಿಯೊದಲ್ಲಿ ಕಾರಿನಲ್ಲಿ ಮಹಿಳೆ ಒಬ್ಬರೇ ಇರುವುದು ಕಂಡು ಬಂದಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಘಟನೆಯನ್ನು ಖಂಡಿಸಿದ್ದರು. ಈಗ ಮಹಿಳೆ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾದ ವಿಡಿಯೊ ಬಿಡುಗಡೆಯಾಗಿದೆ. ಪೊಲೀಸರು ಎರಡೂ ವಿಡಿಯೋಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...