alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ ಸಾಹಸ ಮಾಡಲೋಗಿ ಪ್ರಾಣಬಿಟ್ಟ ಉದ್ಯಮಿ

b

ಸಿನೆಮಾಗಳಲ್ಲಿ, ಟಿವಿ ಶೋಗಳಲ್ಲಿ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಲಾಗುತ್ತೆ. ನುರಿತ ತಜ್ಞರು ಅವುಗಳನ್ನೆಲ್ಲ ಮಾಡ್ತಾರೆ, ಕೆಲವೊಂದು ಗ್ರಾಫಿಕ್ಸ್ ಚಮತ್ಕಾರವೂ ಇರುತ್ತೆ. ಹಾಗಾಗಿ ಆ ಸಾಹಸಗಳಿಗೆ ಕೈಹಾಕದಂತೆ ಸಾರ್ವಜನಿಕರಿಗೆ ಸಂದೇಶವನ್ನೂ ನೀಡಲಾಗುತ್ತದೆ. ಆದ್ರೂ ಕೆಲವರು ಸಿನೆಮಾವನ್ನೇ ನಿಜ ಎಂದುಕೊಂಡು ಪ್ರಾಣಕ್ಕೇ ಸಂಚಕಾರ ತಂದುಕೊಳ್ತಾರೆ.

ಮುಂಬೈನ ಉದ್ಯಮಿ ಕೂಡ ಇಂತಹ ಹುಚ್ಚು ಸಾಹಸಕ್ಕೆ ಕೈಹಾಕಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಇಂದ್ರಪಾಲ್ ಪಾಟೀಲ್ ಶಹಾಪುರದಲ್ಲಿರೋ ಮಹುಲಿ ಫೋರ್ಟ್ ನ ಜಲಪಾತ ವೀಕ್ಷಣೆಗೆ ತೆರಳಿದ್ದ. ಈ ವೇಳೆ ಬಾಹುಬಲಿಯ ಶಿವುಡುನಂತೆ ತಾನು ಕೂಡ ಜಲಪಾತಕ್ಕೆ ಹಾರಿದ್ದಾನೆ.

ಜಲಪಾತದ ತುತ್ತತುದಿಗೆ ತೆರಳಿದ್ದ ಇಂದ್ರಪಾಲ್, ಬಾಹುಬಲಿಯ ಸಾಹಸವನ್ನು ನೆನಪಿಸಿಕೊಂಡಿದ್ದಾನೆ. ತಾನು ಕೂಡ ಅದೇ ರೀತಿ ಜಂಪ್ ಮಾಡಿದ್ದಾನೆ. ಮೇಲಿನಿಂದ ಬಿದ್ದ ರಭಸಕ್ಕೆ ಇಂದ್ರಪಾಲ್ ಮೃತಪಟ್ಟಿದ್ದಾನೆ. ಇಂಥದ್ದೇ ಹುಚ್ಚು ಸಾಹಸಕ್ಕೆ ಕೈಹಾಕಿ ಈವರೆಗೆ ಇಬ್ಬರು ಸಾವನ್ನಪ್ಪಿದ್ದಾರೆ ಅಂತಾ ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...