alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವೀಟರ್ ಸಹಾಯದಿಂದ ಉಳೀತು ಮಗುವಿನ ಪ್ರಾಣ

ಮುಂಬೈನ ಆಟೋ ಒಂದರಲ್ಲಿ ಅನಾಥವಾಗಿ ಬಿದ್ದಿದ್ದ ಮಗುವಿನ ಪ್ರಾಣ ಸಾಮಾಜಿಕ ಜಾಲತಾಣದಿಂದ ಉಳಿದಿದೆ. ನವೆಂಬರ್ 19ರಂದು ಅಮನ್ ಎಂಬುವವರಿಗೆ ಆಟೋದಲ್ಲಿ ಹೆಣ್ಣು ಮಗು ಸಿಕ್ಕಿದೆ. ಈ ವಿಷ್ಯವನ್ನು ಅಮನ್ ಟ್ವೀಟರ್ ಮೂಲಕ ಹೇಳಿದ್ದಾನೆ. ಅಮನ್ ಸಹಾಯಕ್ಕೆ ಬಂದ ಟ್ವೀಟರ್ ಬಳಕೆದಾರರು ಮಗು ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಮನ್ ಗೆ ಆಟೋದಲ್ಲಿ ಮಗು ಸಿಗ್ತಿದ್ದಂತೆ ಪೊಲೀಸರಿಗೆ ಫೋನ್ ಮಾಡಿದ್ದಾನೆ. ಆದ್ರೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲವಂತೆ. ಹಾಗಾಗಿ ಅಮನ್ ಫೋಟೋವನ್ನು ಟ್ವೀಟರ್ ಗೆ ಹಾಕಿ ಏನು ಮಾಡಬೇಕೆಂದು ಕೇಳಿದ್ದಾನೆ. ಟ್ವೀಟರ್ ಬಳಕೆದಾರರೊಬ್ಬರು ಈ ಫೋಟೋವನ್ನು ಮುಂಬೈ ಪೊಲೀಸರಿಗೆ ಕಳುಹಿಸಿದ್ದಾರೆ.

ಫೋಟೋ ನೋಡಿ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ನಿಧಾನವಾಗಿ ಚೇತರಿಸಿಕೊಳ್ತಿದೆ. ಆಕೆ ಆರೋಗ್ಯದಲ್ಲಿ ಏರುಪೇರಾಗ್ತಿರುವುದರಿಂದ ಮಗುವನ್ನು ಸೋಮವಾರ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮನ್ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...