alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ವಿಮಾನ ನಿಲ್ದಾಣದಲ್ಲಿ 1 ಕೋಟಿ ರೂ.ಮೌಲ್ಯದ ಚಿನ್ನ ಜಪ್ತಿ

ಮುಂಬೈ ವಿಮಾನ ನಿಲ್ದಾಣದಲ್ಲಿ ಸುಮಾರು ಒಂದು ಕೋಟಿ ಮೌಲ್ಯದ 3.5 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ದುಬೈನಿಂದ ಮುಂಬೈಗೆ ಬಂದ ಇಂಡಿಗೊ ವಿಮಾನ ಸಂಖ್ಯೆ 6E62ರಲ್ಲಿದ್ದ ಪ್ರಯಾಣಿಕರಿಂದ ಈ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ಎರಡು ದಿನಗಳಲ್ಲಿ ಕಸ್ಟಮ್ಸ್ ಹಾಗೂ ಪೊಲೀಸ್ ವಿಭಾಗ ಭರ್ಜರಿ ಭೇಟೆಯಾಡಿದೆ.  ಇಂಡಿಗೋ ಫ್ಲೈಟ್ ನಲ್ಲಿ ಬಂದಿದ್ದ ಮುಖೇಶ್ ಹಾಗೂ ಆತನ ಸಹೋದರನಿಂದ ನಿರ್ಧಿಷ್ಟ ಪ್ರಮಾಣಕ್ಕಿಂತ ಹೆಚ್ಚಿನ ಮೌಲ್ಯದಲ್ಲಿದ್ದ ಬಳೆ ಹಾಗೂ ಚೈನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಮತ್ತೆ ಐದು ಮಂದಿ ಸಿಕ್ಕಿ ಬಿದ್ದಿದ್ದಾರೆ.

ಇದು ಮೊದಲಲ್ಲ, ದುಬೈನಿಂದ ಬಂಗಾರ ತರುವವರ ಸಂಖ್ಯೆ ಹೊಸದೇನಲ್ಲ. ಚಿತ್ರವಿಚಿತ್ರ ಟ್ರಿಕ್ಸ್ ಬಳಸಿ ಪ್ರಯಾಣಿಕರು ಬಂಗಾರವನ್ನು ದೇಶಕ್ಕೆ ತರುತ್ತಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...