alex Certify
ಕನ್ನಡ ದುನಿಯಾ       Mobile App
       

Kannada Duniya

ಐಎಎಸ್ ಅಧಿಕಾರಿ ಮನೆ ತಲ್ಲಣಗೊಳಿಸ್ತು ಬೆಳಿಗ್ಗೆ 7.30 ಕ್ಕೆ ಬಂದ ಸುದ್ದಿ

untitled-8-6

ಮುಂಬೈನ ಐಎಎಸ್ ಅಧಿಕಾರಿಯೊಬ್ಬರ ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಮುಂಬೈ ಪೊಲೀಸರು ಮನ್ಮೇಶ್ ಮಹೇಶ್ಕರ್ ಸಾವಿನ ಬಗ್ಗೆ ತನಿಖೆ ಶುರುಮಾಡಿದ್ದಾರೆ. ಬೆಳಿಗ್ಗೆ 7.30ಕ್ಕೆ ಬಂದ ಕರೆ ಮುಂಬೈ ಜನತೆಯನ್ನು ನಡುಗಿಸಿದೆ. ಮನ್ಮೇಶ್ ಮುಂಬೈನ ಪ್ರಸಿದ್ಧ ಹಿರಿಯ ಐಎಎಸ್ ಅಧಿಕಾರಿಯ ಏಕೈಕ ಪುತ್ರನಾಗಿದ್ದ.

ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಬೆಳಿಗ್ಗೆ 7 ಗಂಟೆಗೆ ಸ್ನೇಹಿತರ ಮನೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದಾನೆ ಮನ್ಮೇಶ್. 7.30ಕ್ಕೆ ಆತ ಸಾವನ್ನಪ್ಪಿರುವ ಸುದ್ದಿ ಬಂದಿದೆ. ದರಿಯಾ ಮಹಲ್ ನ ಮಹಡಿಯಿಂದ ಕೆಳಗೆ ಬಿದ್ದು 18 ವರ್ಷದ ಮನ್ಮೇಶ್ ಸಾವನ್ನಪ್ಪಿದ್ದಾನೆ.

ಮನ್ಮೇಶ್ ತಂದೆ ಮಿಲಿಂದ್ ಮಹೇಶ್ಕರ್ MHADAನ ಉಪಾಧ್ಯಕ್ಷ ಹಾಗೂ ಸಿಇಓ. ತಾಯಿ ಮನಿಷಾ ಮಹೇಶ್ಕರ್ ನಗರಾಭಿವೃದ್ಧಿ ಇಲಾಖೆಯಲ್ಲಿದ್ದಾರೆ. ಮನ್ಮೇಶ್ ಸಾವಿನ ಹಿಂದೆ ಅನುಮಾನ ಕಾಡಲು ಶುರುವಾಗಿದೆ. ಮನ್ಮೇಶ್ ಪುಣೆಯಲ್ಲಿ ಓದುತ್ತಿದ್ದು ಕೆಲ ದಿನಗಳ ಹಿಂದಷ್ಟೇ ಮುಂಬೈಗೆ ಬಂದಿದ್ದ. ಆತನ ಇಬ್ಬರು ಸ್ನೇಹಿತರು ಹಾಗೂ ಮಾಲ್ ನ ಸೆಕ್ಯೂರಿಟಿ ಗಾರ್ಡ್ ನಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...